ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ರಷ್ಯಾದ ಮಾರಣಾಂತಿಕ ದಾಳಿಯಿಂದಾಗಿ ಉಕ್ರೇನ್ ಜರ್ಜರಿತಗೊಂಡಿದೆ. ಎರಡು ದೇಶಗಳ ನಡುವೆ ಮೂರು ತಿಂಗಳಿನಿಂದ ಯುದ್ಧ ನಡೆಯುತ್ತಿದ್ದರೂ ಯಾರೂ ತಲೆಬಾಗಲು ಸಿದ್ಧರಿಲ್ಲ. ಈ ಯುದ್ಧದ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಯಾಕಂದ್ರೆ ಪುಟಿನ್ ಜೀವನವು ರಹಸ್ಯಗಳಿಂದ ತುಂಬಿದೆ. ಹೀಗಿರುವಾಗ ಬ್ರಿಟನ್‌ನ ಗುಪ್ತಚರ ಸಂಸ್ಥೆ ಎಂಐ6ನ ಮುಖ್ಯಸ್ಥರು ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು ವಿಶ್ವವನ್ನ ಸಂಚಲನ ಮೂಡಿಸಿದೆ.
ಬ್ರಿಟನ್‌ನ ಗುಪ್ತಚರ ಸಂಸ್ಥೆ ಹೇಳ್ತಿರೋದೇನು..?
ರಷ್ಯಾ ಅಧ್ಯಕ್ಷ ಪುಟಿನ್ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ MI6 ಮುಖ್ಯಸ್ಥರು ಹೇಳಿದ್ದಾರೆ. ಪುಟಿನ್ ಸಾವಿನ ರಹಸ್ಯವನ್ನು ಅವರ ಸಹೋದ್ಯೋಗಿಗಳು ತಿಂಗಳುಗಳವರೆಗೆ ಜಗತ್ತಿಗೆ ಮರೆಮಾಡುತ್ತಾರೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪುಟಿನ್ ಸತ್ತಿರುವ ಸಾಧ್ಯತೆ ಹೆಚ್ಚಿದೆ. ಅವರ ಅಧಿಕಾರವನ್ನ ಅಲ್ಲಿರುವ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಪುಟಿನ್ರಂತೆ ಕಾಣುವ ಇನ್ನೊಬ್ಬ ವ್ಯಕ್ತಿಯನ್ನ ತೋರಿಸುತ್ತಿದ್ದಾರೆ ಎಂದು MI6 ಹೇಳಿಕೊಂಡಿದೆ.
ಪುಟಿನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋ ಮಾಹಿತಿಯನ್ನ ಖಚಿತಪಡಿಸಿ MI6 ಈ ವರದಿಯನ್ನ ಮಾಡಿದೆ. ಪುಟಿನ್ ಸತ್ತರೆ, ಅದನ್ನು ವಾರಗಳು ಅಥವಾ ತಿಂಗಳುಗಳವರೆಗೆ ಮರೆಮಾಡಲಾಗುತ್ತದೆ. ಈಗಾಗಲೇ ಸಾವನ್ನಪ್ಪಿರುವ ಸಾಧ್ಯತೆಯೂ ಇದೆ. ಅದನ್ನು ಕಂಡುಹಿಡಿಯುವುದು ಅಸಾಧ್ಯ ಎಂದು MI6 ತನ್ನ ವರದಿಯಲ್ಲಿ ಪುನರುಚ್ಚರಿಸಿದೆ.
ಯಾಕೆ ಮರೆ ಮಾಚುತ್ತಿದ್ದಾರೆ..?
ಪುಟಿನ್ ಸಾವಿನ ಬಗ್ಗೆ ಯಾಕೆ ಮರೆಮಾಚುತ್ತಿದ್ದಾರೆ ಅನ್ನೋದಕ್ಕೂ MI6 ವಿವರ ನೀಡಿದ್ದು, ಒಂದು ವೇಳೆ ಅವರ ಸಾವಿನ ಸುದ್ದಿ ಹೊರಬಂದರೆ ರಷ್ಯಾದಲ್ಲಿ ದಂಗೆ ನಡೆಯಬಹುದು. ಹೀಗಾಗಿ ಪುಟಿನ್ ಸಹಚರರು ಭಯಪಡುತ್ತಿದ್ದಾರೆ. ನಂತರ ಉಕ್ರೇನ್‌ನಿಂದ ಸೇನೆ ಬರಬಹುದು. ಪುಟಿನ್ ಸಾವು ನಮ್ಮನ್ನ ದುರ್ಬಲಗೊಳಿಸುತ್ತದೆ, ಅಧಿಕಾರವೂ ಹೋಗುತ್ತದೆ. ಹೀಗಾಗಿ ಪುಟಿನ್ ಜೀವಂತವಾಗಿದ್ದಾರೆ ಅನ್ನೋದೇ ಒಳ್ಳೆಯದು ಎಂದು ಪುಟಿನ್ ಆಪ್ತರು ಸಾವಿನ ಬಗ್ಗೆ ಮರೆಮಾಚುತ್ತಿದ್ದಾರೆ ಎಂದಿದೆ.
ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಪುಟಿನ್..!!
ಇತ್ತೀಚೆಗಷ್ಟೇ ರಷ್ಯಾದ ಬಿಲಿಯನೇರ್ ಉದ್ಯಮಿ ಒಬ್ಬರು ಪುಟಿನ್ ಅನಾರೋಗ್ಯದ ಬಗ್ಗೆ ಮಾತನಾಡಿದ್ದರು. ಅವರಿಗೆ ರಕ್ತದ ಕ್ಯಾನ್ಸರ್ ಇದೆ. ಅವರ ಸ್ಥಿತಿ ಚೆನ್ನಾಗಿಲ್ಲ. ಉಕ್ರೇನ್ ಮೇಲಿನ ದಾಳಿಗೂ ಮುನ್ನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಅನ್ನೋ ಮಾಹಿತಿಯನ್ನ ಬಹಿರಂಗಪಡಿಸಿದ್ದರು.























