ಅಮೃತಸರ: ಸಿಧು ಮೂಸೆವಾಲಾ.. ಸೇಮ್ ಬೀಫ್ನಿಂದ ಹಿಡಿದು ಸೋ ಹೈ ತನಕ ಬ್ಯಾಕ್ ಟು ಬ್ಯಾಕ್ ಅದ್ಭುತ ಹಾಡುಗಳನ್ನ ನೀಡಿದಾತ. ತನ್ನ ಱಪ್ ಮೂಲಕವೇ ಕೋಟಿ ಕೋಟಿ ಫಾಲೋವರ್ಸ್ಗಳನ್ನ ಹೊಂದಿರೋ ಸಿಧು, ರಾಜಕೀಯ ರಂಗದಲ್ಲೂ ಗುರುತಿಸಿಕೊಂಡವರು. ಇದೇ ಱಪ್ ಸಿಂಗರ್ನನ್ನ ಎಕೆ 47 ನಿಂದ ಗುಂಡಿಕ್ಕಿ ಭೀಕರ ಹತ್ಯೆ ಮಾಡಿದ್ದಾರೆ.
ಮೊನ್ನೆಯಷ್ಟೇ ಪಂಜಾಬ್ ಸರ್ಕಾರ, ಸುಮಾರು 424 ಜನರ ಭದ್ರತೆಯನ್ನ ಕಡಿತಗೊಳಿಸಿತ್ತು. ಇದಾದ ಕೇವಲ 24 ಗಂಟೆಯಲ್ಲೇ ಪಂಜಾಬ್ನಲ್ಲಿ ನೆತ್ತರು ಹರಿದಿದೆ. 27 ವರ್ಷದ ಪಂಜಾಬ್‌ನ ಖ್ಯಾತ ಸಿಂಗರ್ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಮೇಲೆ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಲಾಗಿದೆ. ಸ್ನೇಹಿತರ ಜೊತೆ ತೆರಳ್ತಿದ್ದ ಸಿಧು ಮೇಲೆ ಸುಮಾರು 20 ಸುತ್ತು ಫೈರಿಂಗ್ ಮಾಡಿ ಘನ ಘೋರವಾಗಿ ಕೊಂದು ಹಾಕಿದ್ದಾರೆ.
ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ಗ್ಯಾಂಗ್ ದಾಳಿ
ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸಿಧು ಮೂಸೆವಾಲಾ ಮೇಲೆ ಅಪರಿಚಿತ ಗ್ಯಾಂಗ್ ಅಟ್ಯಾಕ್ ಮಾಡಿದೆ, ಥಾರ್ ಜೀಪ್ನಲ್ಲಿ ತೆರಳ್ತಿದ್ದ ಸಿಧು ಮತ್ತು ಅವರ ಸ್ನೇಹಿತ ಮೇಲೆ ಸರಣಿ ಗುಂಡಿನ ದಾಳಿ ಮಾಡಿತ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲಾದ್ರೂ ಅಷ್ಟರಲ್ಲೇ ಸಿಧು ಜೀವ ಹೋಗಿತ್ತು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಆತನ ಇಬ್ಬರು ಸ್ನೇಹಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಡಿಜಿಪಿ ವಿಕೆ ಭಾವ್ರಾ, ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ. ಕೆನಡಾ ಮೂಲದ ಲಕ್ಕಿ ಎಂಬಾತ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಬ್ಲ್ಯಾಕ್ ಕಲರ್ ಥಾರ್ ಜೀಪ್ನಲ್ಲಿ ಸಿಧು ಮತ್ತು ಆತನ ಇಬ್ಬರು ಸ್ನೇಹಿತರು ಮಾನ್ಸಾದ ಜವಾಹರ್ಕೆ ಗ್ರಾಮದ ಮೂಲಕ ಹೋಗ್ತಿದ್ರು. ಆದ್ರೆ ಹಿಂದಿನಿಂದ ಬಿಳಿ ಬಣ್ಣ ಕಾರಿನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ. ಹತ್ಯೆ ಹಿಂದೆ ಕೆನಡಾ ಮೂಲದ ಗ್ಯಾಂಗ್ ಲಾರೆನ್ಸ್ ಇರೋ ಸಾಧ್ಯತೆ ಇದೆ. ಘಟನೆ ಬಳಿಕ ಭಗವಂತ್ ಮಾನ್ ಸರ್ಕಾರದ ವಿರುದ್ಧ ಆಕ್ರೋಶ ಎದ್ದಿದೆ.
ಮೊನ್ನೆಯಷ್ಟೇ 424 ಜನರ ಭದ್ರತೆನ್ನ ಹಿಂಪಡೆದಿದ್ದ ಸರ್ಕಾರ
ಮೊನ್ನೆಯಷ್ಟೇ ಪಂಜಾಬ್‌ನ ಸುಮಾರು 424 ಜನರ ಭದ್ರತೆಯನ್ನ ಸಿಎಂ ಭಗವಂತ್ ಮಾನ್ ಹಿಂಪಡೆದಿತ್ತು. ಅದರಲ್ಲಿ ಸಿಧು ಮೂಸೆವಾಲಾ ಅವರ ನಾಲ್ವರು ಸಿಬ್ಬಂದಿ ಪೈಕಿ ಇಬ್ಬರು ಕಮಾಂಡೋಗಳನ್ನ ವಾಪಸ್ ಪಡೆದಿತ್ತು. ಅದರಂತೆ ನಿನ್ನೆ ಇಬ್ಬರು ಗನ್ ಮ್ಯಾನ್ ಬಿಟ್ಟು ಮನೆಯಿಂದ ಸಿಧು ಹೊರಗೆ ಬಂದಿದ್ರು. ಜೊತೆಗೆ ತಮ್ಮ ಬುಲೆಟ್ ಫ್ರೋಪ್ ಕಾರಿನ ಬದಲಿ ಥಾರ್ ಜೀಪ್ನಲ್ಲಿ ಪ್ರಯಾಣ ಬೆಳೆಸಿದ್ರು. ಆದ್ರೆ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಸಿಧುರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿಧು ಮೂಸೆವಾಲಾ
ಸಿಧು ಮೂಸೆವಾಲಾಗೂ ವಿವಾದಕ್ಕೂ ಒಂದಿಲ್ಲೊಂದು ನಂಟು. ಸಿಖ್ ಯೋಧ ಮೈ ಭಾಗೋ ಹೆಸರನ್ನ ದುರುಪಯೋಗಪಡಿಸಿಕೊಂಡಿದ್ರು. ಸಿಖ್ ಭಾವನೆಗಳಿಗೆ ಘಾಸಿ ತಂದಿದ್ರು. ನಂತರ ಇದಕ್ಕೆ ಕ್ಷಮೆ ಕೇಳಿದ್ರು. ತಮ್ಮ ಸಂಜು ಹಾಡಿನಲ್ಲಿ ಗನ್, ಹೊಡೆದಾಟ, ಬಡಿದಾಟ, ಕೊಲೆ, ದರೋಡೆಕೋರರನ್ನ ವೈಭವಿಕರಿಸಿದ್ರು. ಇನ್ನು ಕಾಂಗ್ರೆಸ್ ಸೇರಿದ್ದ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ರು. ಆದ್ರೆ ಮೂಸೆವಾಲಾ ಖ್ಯಾತಿ ಮಾತ್ರ ಕಡಿಮೆ ಆಗಿರಲಿಲ್ಲ. ಸದ್ಯ ಸಿಂಗರ್ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದ ತನಿಖೆಗೆ ಮಾನ್ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಏನೇ ಆದ್ರೂ ಪಂಜಾಬ್ನಲ್ಲಿ, ಅದರಲ್ಲೂ ಹಗಲೊತ್ತಲ್ಲೇ ಖ್ಯಾತ ಗಾಯಕನ ನೆತ್ತರು ಹರಿದಿದ್ದು, ಇಡೀ ಪಂಜಾಬ್ ಅನ್ನೇ ಹಂಗಾಗುವಂತೆ ಮಾಡಿದೆ.

























