ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆಗೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತ್ತಡ್ಕ ಜೂ.1 ರಂದು ಭೇಟಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮುಖಂಡರು ಪರಿಶೀಲನೆ ನಡೆಸಿ, ಚಿತ್ರಕೂಟದಲ್ಲಿ ನಾಗನ ಪ್ರತಿಷ್ಠೆಯಾಗಬೇಕು ಎಂದು ಹೇಳಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದ್ದು, ಆದರೇ ಈ ನಾಗನ ಕಟ್ಟೆ ಚಿತ್ರಕೂಟದಲ್ಲಿಲ್ಲ ಎಂದು ಹೇಳಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಿದ ನಾಗನ ಕಟ್ಟೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೇ.30 ರಂದು ಪ್ರತಿಭಟನೆಯನ್ನು ನಡೆಸಿದ್ದರು.
ಮೇ.31 ರಂದು ಮಾಣಿಲ ಶ್ರೀಗಳು ಭೇಟಿ ನೀಡಿ, ಕ್ಷೇತ್ರದ ತಂತ್ರಿಗಳನ್ನು ಮತ್ತು ಜ್ಯೋತಿಷ್ಯರನ್ನು ಕರೆ ತಂದು ಒಂದು ದಿನದ ತಾಂಬೂಲ ಪ್ರಶ್ನೆ ನಡೆಸಿ, ಮತ್ತೆ ಕೆಲಸವನ್ನು ಮುಂದುವರೆಸಿ ಎಂದು ಶ್ರೀಗಳು ಸಲಹೆಯನ್ನು ನೀಡಿದ್ದರು.



























