ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಿ.ಎಫ್.ಐ ಸಂಘಟನೆಗೆ ಸೇರಿದ್ದೆನ್ನಲಾದ ವಿವಿಧ ಬ್ಯಾಂಕುಗಳಲ್ಲಿರುವ 33 ಖಾತೆಗಳನ್ನು ಇಡಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.
ವಿದೇಶದಿಂದ ಕದ್ದುಮುಚ್ಚಿ ವರ್ಗಾವಣೆಯಾಗಿರುವ ಹಣದ ಮೂಲ ಮತ್ತು ವ್ಯವಹಾರ ಹಾಗೂ ಉದ್ಧೇಶಗಳ ಬಗ್ಗೆ ಲೆಕ್ಕ ಪತ್ರ ಹಾಗೂ ವಿವರಣೆ ನೀಡುವಂತೆ ನೋಟೀಸು ನೀಡಿದ್ದರೂ ವಿಫಲವಾದ ಕಾರಣಕ್ಕಾಗಿ ಇಡಿ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಖಚಿತ ಮೂಲಗಳು ಸ್ಪಷ್ಟಪಡಿಸಿವೆ.


























