ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಕೊಠಡಿ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ತಾಲೂಕಿನ ಶತಮಾನ ಪೂರೈಸಿದ ಕಲ್ಲಡ್ಕ ಸಮೀಪದ ಬೋಳಂತೂರು ಶಾಲೆಯಲ್ಲಿ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ದೇಶ-ವಿದೇಶಗಳಲ್ಲಿ ವೃತಿಪರತೆಯೊಂದಿಗೆ ಯಶಸ್ಸಿನ ನೆಲೆ ಕಂಡುಕೊಂಡಿದ್ದಾರೆ.

ಎಸ್.ಡಿ.ಎಂ.ಸಿ. ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ನೂತನವಾಗಿ ಎರಡು ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಕೊಠಡಿಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉದ್ಘಾಟನೆಯನ್ನು ಅನಂತ ಪದ್ಮನಾಭ ಬಳ್ಳಕ್ಕುರಾಯರು ಮತ್ತು ಇಸ್ಮಾಯಿಲ್ ಅವರು ನೇರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಮಕ್ಕಳು ತಮ್ಮ ಪ್ರಾರ್ಥನಾ ಹಾಡಿನೊಂದಿಗೆ ಆರಂಭಿಸಿದರು. ಅತಿಥಿಗಳನ್ನು ಹಾಗೂ ಗಣ್ಯರನ್ನು ಶಾಲೆಯ ಹಿರಿಯ ದೈಹಿಕ ಶಿಕ್ಷಕರಾದ ಹರೀಶ್.ಬಿ. ಸ್ವಾಗತಿಸಿದರು.

ಮುಖ್ಯ ಶಿಕ್ಷಕಿ ಗೀತಾ.ಎಸ್. ರವರು ಪ್ರಾಸ್ತಾವಿಕ ಭಾಷಣದ ಮೂಲಕ ಶಾಲೆಯ ಅಭಿವೃದ್ಧಿ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಸಭಿಕರಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರು.

ವಿವಿಧ ಸಂಧರ್ಭಗಳಲ್ಲಿ ಸೇವೆ ಸಲ್ಲಿಸಿದ ಊರಿನ ಹಿರಿಯ ಚೇತನರಾದ ಕೇಶವಯ್ಯ. ಎಸ್. ಸುರೇಶಿನಿ, ಇಸ್ಮಾಯಿಲ್, ಸಂದೇಶ್.ಎಚ್.ನಾಯ್ಕ್, ರವರನ್ನು ಸನ್ಮಾನಿಸಲಾಯಿತು.

ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶಾಲಿಮರ್ ಬಿಲ್ಡರ್ ಇದರ ಮಾಲಕರಾದ ಸುರಿಬೈಲು ನಿವಾಸಿ ಬಶೀರ್ ಆಹ್ಮದ್ ಶಾಲಿಮಾರ್ ವರು ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆಬ್ಬಾಸ್ ಆಲಿ, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಬಶೀರ್ ನಾರಂಕೋಡಿ, ಬೋಳಂತೂರು ಗ್ರಾಮ.ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪ.ಎಂ., ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರೂ, ಸದಸ್ಯರಾದ ಚಂದ್ರಶೇಖರ್ ರೈ ನಾರ್ಶ, ಅಶ್ರಫ್ ಸುರಿಬೈಲ್, ಯಾಕೂಬ್ ದಂಡೆಮಾರ್, ಹಿರಿಯ ವಿದ್ಯಾರ್ಥಿ ಹಾಗೂ ಸಾಮಾಜಿಕ ನೇತಾರ ಜಯರಾಮ್ ರೈ ಗುಡ್ಡೆಮಾರ್, ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾದ ತಮೀಮ್ ಬೊಳಂತೂರು,ಕಾರ್ಯದರ್ಶಿ ಅಮೀರ್, ಇಸ್ಮಾಯಿಲ್ ಬೊಳಂತೂರು, ಉಸ್ಮಾನ್ ಬಂಗಾರಕೋಡಿ ,ಅಮೀನ್ ಬೀಡಿ ಮಾಲಕರಾದ ಸುರೇಂದ್ರ ಅಮೀನ್, ಪವಿತ್ರ ಬೀಡಿ ಮಾಲಕರಾದ ರಪೀಕ್.ಕೆ.ಪಿ.ಬೈಲ್,ಯುವ ಉದ್ಯಮಿ ಸಲೀಂ ಕುಡುಂಬಕೋಡಿ, ಸಲೀಂ ಬೊಟ್ಟಿಗದ್ದೆ,ಹಸೈನಾರ್ ಟಿ.ತಾಳಿತ್ತನೂಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಮೀದ್ ಗೋಳ್ತಮಜಲ್ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.





























