ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸ್ಥಾನಕ್ಕೆ ನಾರಾಯಣ ನಾಯ್ಕ್ ರವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ನಾರಾಯಣ ನಾಯ್ಕ್ ರವರು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನಿರ್ಧರಿಸಿದ್ದಾರೆ.
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಲೋಕಪ್ಪ ಗೌಡ ಸರ್ವಾಧಿಕಾರಿ ಧೋರಣೆ ಮತ್ತು ದೇವಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿಯೂ ನಮ್ಮನ್ನು ಕಡೆಗಣಿಸಿ ನಮಗೆ ಮಾನಸಿಕವಾಗಿ ನೋವು ತಂದಿದ್ದಾರೆ.
ನಮ್ಮ ಸಮಿತಿಯ ಸಭೆಗೂ ನಮ್ಮನ್ನು ಕರೆಯುವುದನ್ನು ನಿಲ್ಲಿಸಿದ್ದಾರೆ. ಹಿಂದೆ ನಡೆದ ಸಭೆಯಲ್ಲಿಯೂ ಮೊದಲು ನಮ್ಮ ಸಹಿ ಹಾಕಿಸಿ ನಂತರ ನಾವುಗಳು ತೆರಳಿದ ನಂತರ ನಿರ್ಣಯಗಳನ್ನು ಬರೆಯುತ್ತಿದ್ದರು. ಇದಕ್ಕೆ ವಿರೋಧಿಸಿದರೂ ಅವಮಾನಿಸುತ್ತಿದ್ದರು. ದೇವಸ್ಥಾನದ ಶಾಶ್ವತ ಪೂಜೆಯ ಹಣವನ್ನು ಕೂಡ ನಗಧೀಕರಿಸಿರುವುದು ನಮಗೆ ತಿಳಿದಿರುವುದಿಲ್ಲ. ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿಯೂ ಕೂಡ ಊರಿನವರನ್ನು ಭಕ್ತಾದಿಗಳನ್ನು ಸಭೆಗೆ ಕರೆದಿಲ್ಲ. ನಾಗನಕಟ್ಟೆ ಕೆಲಸದ ಬಗ್ಗೆ ನಾವು ಶಾಸ್ತ್ರೋಕ್ತವಾಗಿ ಪ್ರಶ್ನಾ ಚಿಂತನೆಯಲ್ಲಿ ಬಂದ ಹಾಗೆ ಚಿತ್ರಕೂಟದಲ್ಲಿ ಪ್ರತಿಷ್ಠಾಪನೆ ಮಾಡುವ ಎಂದು ಹೇಳಿದರೂ, ಕೇಳದೆ ಅವೈಜ್ಞಾನಿಕವಾಗಿ ನಾಗನ ಕಟ್ಟೆಯನ್ನು ನಿರ್ಮಿಸಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಿರುತ್ತಾರೆ. ದೇವಸ್ಥಾನದ ಹಣ ದುರುಪಯೋಗ ಅವ್ಯವಹಾರ ಇವೆಲ್ಲ ಮಾಡಿರುವ ಲೋಕಪ್ಪಗೌಡ ರವರ ನೇತೃತ್ವದ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲದೆ ರಾಜೀನಾಮೆ ನೀಡುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ..
ಅಧ್ಯಕ್ಷರಿಂದ ನಡೆದಿದೆಯೇ ಅವ್ಯವಹಾರ..!??
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರು ದೇವಸ್ಥಾನದ ಹಣವನ್ನು ದುರುಪಯೋಗ ನಡೆಸಿದ್ದಾರೆ ಎಂದು ಸಾರ್ವಜನಿಕರು ಪ್ರತಿಭಟನಾ ಸಭೆ ನಡೆಸಿದ ಘಟನೆ ಮೊನ್ನೆ ನಡೆದಿತ್ತು ಹಾಗೂ ಈ ಬಗ್ಗೆ ದೂರನ್ನು ನೀಡಲಾಗಿತ್ತು ಅಲ್ಲದೆ ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆಂದು ಹಲವಾರು ಅಸಮಾಧಾನ ವ್ಯಕ್ತ ಪಡಿಸಿದ್ದರು ಈ ಬೆನ್ನಲ್ಲೇ ಹಲವರು ಸ್ಥಳಕ್ಕೆ ತೆರಳಿ ಕಟ್ಟೆಯು ಸರಿಯಾಗಿ ನಿರ್ಮಿತವಾಗಿದೆ ಎಂದು ಹೇಳಿದ್ದರು ಹಾಗೂ ಹಲವು ಸಲಹೆಗಳನ್ನು ನೀಡಿದ್ದರು. ಸದ್ಯ ಅಧ್ಯಕ್ಷರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು ಇವೆಲ್ಲದರ ಸತ್ಯಾಂಶ ತನಿಖೆಯ ನಂತರವೇ ತಿಳಿಯಬೇಕಿದೆ.


























