ಪುತ್ತೂರು: ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಹಿಂದೂ ಯುವಕನೊಬ್ಬನಿದ್ದಾನೆ, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಒಳಗಡೆ ಇದ್ದಾರೆ ಎಂಬ ಸುದ್ದಿ ಕಾಡಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಎರಡೂ ಕೋಮಿನ ಜನರು ಜಮಾಯಿಸಿದ ಘಟನೆ ಜೂ.1 ರಂದು ಕಬಕ ಸಮೀಪ ನಡೆದಿದೆ.
ಕಬಕ ಸಮೀಪದ ಮನೆಯೊಂದರ ಮುಂಭಾಗಲಿಗೆ ಬೀಗ ಹಾಕಲಾಗಿತ್ತು. ಎದುರಿನಿಂದ ಬೀಗ ಹಾಕಿ ಒಳಗಡೆ ಮಹಿಳೆಯ ಜೊತೆ ಆಟೋ ಚಾಲಕ ಯುವಕನೋರ್ವ ಇದ್ದಾನೆ ಎಂಬ ಸುದ್ದಿಯನ್ನು ಯಾರೋ ಹಬ್ಬಿಸಿದ್ದು, ಈ ಹಿನ್ನೆಲೆ ಮನೆಯ ಸುತ್ತ ನೂರಾರು ಮಂದಿ ಜಮಾಯಿಸುತ್ತಿದ್ದಂತೆಯೇ ನಗರ ಪೊಲೀಸರಿಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಮನೆಯ ಸುತ್ತ ಪರಿಶೀಲನೆ ನಡೆಸುವ ವೇಳೆ ಹಿಂಬಾಗಿಲಿನ ಚಿಲಕ ತೆರೆಯಲಾಗಿದ್ದು, ಬಾಗಿಲೂ ತೆರೆಯಲಾಗಿತ್ತು. ಜನ ಸೇರುವುದನ್ನು ಕಂಡ ಇವರಿಬ್ಬರು ಹಿಂಬಾಗಿಲಿನ ಮೂಲಕ ಓಡಿ ತಪ್ಪಿಸಿಕೊಂಡಿದ್ದು, ಯಾರಿಗೂ ಗೊತ್ತಾಗಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಸೇರಿದ್ದ ಜನರನ್ನು ಅಲ್ಲಿಂದ ಚದುರಿಸಿದ್ದಾರೆ.
ರಿಕ್ಷಾ ಚಾಲಕ ಮತ್ತು ಮಹಿಳೆಯ ನಡುವೆ ಸಂಬಂಧದ ಬಗ್ಗೆ ಹಲವು ದಿನಗಳಿಂದ ಕೊಡಿಪ್ಪಾಡಿಯಲ್ಲಿ ಗುಸುಗುಸು ಸುದ್ದಿ ಹಬ್ಬಿತ್ತು. ಇವರಿಬ್ಬರನ್ನೂ ರೆಡ್ ಹ್ಯಾಂಡಾಗಿ ಹಿಡಿಯಲು ಕೆಲವರು ಕಾಯುತ್ತಿದ್ದರೆನ್ನಲಾಗಿದೆ. ಇದರ ಮುಂದುವರೆದ ಭಾಗವಾಗಿ ಜೂ.2 ರಂದು ಈ ಘಟನೆ ನಡೆದಿದೆ. ಮುಸ್ಲಿಂ ಮಹಿಳೆಯ ಮನೆಯಲ್ಲಿದ್ದಾತ ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ಸುದ್ದಿಯೂ ಹರಡಿತ್ತು. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

























