ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಬೊಳ್ವಾರು ಪುತ್ತೂರಿನಲ್ಲಿ ಬೀಜದುಂಡೆ ತಯಾರಿಸುವ ಕಾರ್ಯಕ್ರಮ ಜೂ.02 ರಂದು ನಡೆಯಿತು.

ಪುತ್ತೂರು ಸ್ಥಳೀಯ ಸಂಸ್ಥೆಯ ಸ್ಕೌಟ್ಸ್,ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಸೇರಿ ಒಟ್ಟು 1000 ದಷ್ಟು ಬೀಜದುಂಡೆಯನ್ನು ಸಿದ್ಧಪಡಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷರು ಶ್ರೀಧರ್ ರೈ, ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಜೊತೆ ಕಾರ್ಯದರ್ಶಿ ಸುನೀತ, ಗೈಡ್ ಶಿಕ್ಷಕಿಯರಾದ ಮೇಬಲ್ ಡಿಸೋಜಾ, ಮೈತ್ರಿಯ, ಗೀತಾ ಆಚಾರ್ಯ, ಅರಣ್ಯ ಇಲಾಖೆಯ ಶಿವಾನಂದ ರವರು ಉಪಸ್ಥಿತರಿದ್ದರು.






























