ಪುತ್ತೂರು: ಶ್ರೀರಾಮ ಗೆಳೆಯರ ಬಳಗ ರಿ. ಪುತ್ತಿಲ ವತಿಯಿಂದ ಮುಂಡೂರು ಗ್ರಾಮದ ನಡುಗುಡ್ಡೆಯ ಬಡಕುಟುಂಬದ ಮೂರು ಮಕ್ಕಳಿಗೆ ಶಿಕ್ಷಣಕ್ಕಾಗಿ ಪುಸ್ತಕದ ಅವಶ್ಯಕತೆ ಇರುವುದನ್ನು ಮನಗಂಡು ಪುಸ್ತಕವನ್ನು ವಿತರಿಸಿದರು.

ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷರಾಗಿರುವ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಶಿಕ್ಷಣ ಪಡೆಯುವಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಪುಸ್ತಕ ನೀಡಿ ಸ್ಪಂದಿಸಿದರು. ಹಾಲು ಉತ್ಪಾದಕ ಸಹಕಾರಿ ಸಂಘ ಕರಮನೆ ಕಟ್ಟೆಯ ಕಾರ್ಯದರ್ಶಿ ಶ್ವೇತಾ ಹಾಗೂ ಸಹಾಯಕರಾಗಿರುವ ವೇದಾವತಿ ಕರಮನೆ ಕಟ್ಟೆ ಮಕ್ಕಳಿಗೆ ಪುಸ್ತಕ ವಿತರಿಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾಗಿರುವ ಹರೀಶ ಬಿ. ಕೆ, ಸದಸ್ಯರುಗಳಾಗಿರುವ ಸತೀಶ ಬಿ. ಕೆ, ಅಶೋಕ ನಾಯ್ಕ್ ಪುತ್ತಿಲ, ಧನಂಜಯ ಕಲ್ಲಮ, ಪ್ರತೀಕ್ ಪುತ್ತಿಲ, ಸ್ಥಳೀಯರಾದ ಕಿಸ್ತು ಡಿಸೋಜಾ ಉಪಸ್ಥಿತರಿದ್ದರು.


























