ಬೆಳ್ತಂಗಡಿ: ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೊಕ್ಕಡದಲ್ಲಿ ಇತ್ತೀಚೆಗೆ ಆಟೋ ಚಾಲಕನ ಲವ್ ಜಿಹಾದ್ ಪ್ರಕರಣ ಹಿನ್ನಲೆಯಲ್ಲಿ ಕೊಕ್ಕಡ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಬ್ಯಾನರ್ ಅಳವಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೊಕ್ಕಡದ ಅನ್ಯಕೋಮಿನ ಯುವಕನೊಂದಿಗೆ ಯುವತಿಯ ಪ್ರೇಮಾಂಕುರ ವಿಷಯಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳು ಯುವಕನಿಗೆ ಎಚ್ಚರಿಕೆ ನೀಡಿದ ಘಟನೆ ನಡೆದ ಬೆನ್ನಲ್ಲೇ ಜೂ.3 ರಂದು ಈ ಬ್ಯಾನರ್ ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದಿದೆ.

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕೊಕ್ಕಡ ಪ್ರಕಟಣೆ ಎಂದು ಬರೆದಿದ್ದು, ಬಳಿಕ ಹಿಂದೂ ಶ್ರದ್ಧಾ ಕೇಂದ್ರವಾದ ನಮ್ಮ ಊರಿನ ಪುಣ್ಯ ಕ್ಷೇತ್ರ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದೂಯೇತರರ, ಆಟೋ ಮತ್ತು ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬರೆಯಲಾಗಿದೆ.


























