ಪುತ್ತೂರು: ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜೂ.1 ರಿಂದ 3 ರವರೆಗೆ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ದಿನೇಶ ಮರಡಿತ್ತಾಯ ಗುಮ್ಮಟೆಗದ್ದೆ ರವರ ನೇತೃತ್ವದಲ್ಲಿ ವಾಸ್ತುಶಿಲ್ಪಿ ವಿ.ಜಿ.ಜಗನ್ನಿವಾಸ ರಾವ್ ರವರ ಮಾರ್ಗದರ್ಶನದಲ್ಲಿ ಭಜನಾ ಮಂದಿರದ ಶಂಕುಸ್ಥಾಪನೆ ನೆರವೇರಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಸಂಜೀವ ಮಠಂದೂರು, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ನ ಮಾಲಕರಾದಂತಹ ಸೀತಾರಾಮ ರೈ ಕೆದಂಬಾಡಿಗುತ್ತು, ಖ್ಯಾತ ವೈದ್ಯ ಸುರೇಶ್ ಪುತ್ತೂರಾಯ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೆಪಿಸಿಸಿ ಸಂಯೋಜಕ ಕಾವು ಹೇಮಾನಾಥ್ ಶೆಟ್ಟಿ, ರಾಕೇಶ್ ಪರ್ಪುಂಜ, ರಾಜೇಶ್ ಬನ್ನೂರು, ಉದ್ಯಮಿ ಸಂತೋಷ್ ರೈ ಕೈಕಾರ, ಉದ್ಯಮಿ ಸೀತಾರಾಮ ರೈ ಕೈಕಾರ, ಶ್ರೀಧರ್ ರೈ ಹೊಸಮನೆ, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಮಹಾಬಲ ರೈ ವಲ್ಲತ್ತಡ್ಕ, ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದ ಅಧ್ಯಕ್ಷರಾದ ಅಜಿತ್ ರೈ ಹೊಸಮನೆ, ಆಡಳಿತ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ಮತ್ತಿತರ ಗಣ್ಯರು, ಸ್ಥಳೀಯರು, ಸಾರ್ವಜನಿಕರು ಉಪಸ್ಥಿತರಿದ್ದರು.

























