ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಂಬಳಬೆಟ್ಟುವಿನಲ್ಲಿ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಜೂ.3 ರಂದು ನಡೆಯಿತು.

ಶಾಲಾ ಹಿರಿಯ ವಿದ್ಯಾರ್ಥಿ ಬದ್ರಿಯಾ ಅಬ್ದುಲ್ ಅಝೀಜ್ ರವರು ಸುಮಾರು 40,000 ರೂ. ಮೌಲ್ಯದ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ಒದಗಿಸಿದರು.

ವಿಟ್ಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜಯಪ್ರಕಾಶ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಮಹಾಬಲೇಶ್ವರ ಭಟ್, ಸಿದ್ದಿಕ್, ಮರಿಯಮ್ಮ ಉಪಸ್ಥಿತರಿದ್ದರು.

ಶಾಲಾ ಎಸ್.ಡಿ. ಎಂ.ಸಿ. ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮತ್ತು ಕಂಬಳಬೆಟ್ಟು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರವಿಪ್ರಸಾದ್ ಭಾಗವಹಿಸಿದ್ದರು.

ಶಾಲಾ ಶಿಕ್ಷಕ, ವಿ. ರಾಧಾಕೃಷ್ಣ ವರ್ಮ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಅಕ್ಷತಾ, ಪ್ರಿಯಾ ಸಹಕರಿಸಿದರು.
































