ಪುತ್ತೂರು: ಬೈಕ್ ಗೆ ಸೈಡ್ ಕೊಡಲು ಹೋಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯ ಒಂದು ಚಕ್ರ ಹೊಂಡದಲ್ಲಿ ಹೂತು ಹೋದ ಘಟನೆ ಜೂ.3 ರಂದು ಎಪಿಎಂಸಿ ರಸ್ತೆಯ ರೈಲ್ವೇ ಗೇಟ್ ಬಳಿ ನಡೆದಿದೆ.

ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿ ಬೈಕ್ ಗೆ ಸೈಡ್ ಕೊಡಲು ಹೋಗಿದ್ದು, ಈ ವೇಳೆ ರಸ್ತೆಯ ಪಕ್ಕದಲ್ಲಿರುವ ಹೊಂಡದಲ್ಲಿ ಲಾರಿಯ ಒಂದು ಚಕ್ರ ಹೂತು ಹೋಗಿದ್ದು,, ಈ ಹಿನ್ನೆಲೆ ಲಾರಿ ಒಂದು ಬದಿಗೆ ವಾಲಿ ನಿಂತಿದೆ.
ಘಟನೆಯಿಂದಾಗಿ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.


























