ಬಂಟ್ವಾಳ: ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟು ಗಳನ್ನೆಲ್ಲಾ ಜಾಲಾಡಿ ಒಂದು ಮನೆಯಿಂದ ಬಾಡಿಗೆ ನೀಡಲು ತೆಗೆದಿಟ್ಟಿದ್ದ ಒಂದು ಸಾವಿರ ಹಣ,ಕಾಣಿಕೆ ಡಬ್ಬಿಯಲ್ಲಿದ್ದ ಹಣ ಮತ್ತು ಚಿನ್ನವೆಂದು ಭಾವಿಸಿ ಕೆಲವು ಗೋಲ್ಡ್ ಆಭರಣಗಳನ್ನು,ಬೆಳ್ಳಿಯ ಕಾಲು ಚೈನ್ ಹಾಗೂ ಇನ್ನೊಂದು ಮನೆಯ ಕಪಾಟು ಜಾಲಾಡಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳ್ಳತನ ಮಾಡಿದ್ದಾರೆ,ಅಂಗಡಿಯಲ್ಲಿ ಏನೂ ಸಿಗದೆ ಅಲ್ಲಿದ್ದ ಕೆಲವು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ತೆರಳಿದ ಘಟನೆ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಕಳ್ಳತನ ನಡೆದ ಮನೆಯು ಬಾಡಿಗೆಯದ್ದಾಗಿದ್ದು ಬಡ ಕುಟುಂಬಗಳು ಅದರಲ್ಲಿ ನೆಲೆಸಿತ್ತು, ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಒಂದು ಮನೆಯವರು ಬೀಗಹಾಕಿ ಹೋಗಿದ್ದರು. ಇನ್ನೊಂದು ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದ ಸಮಯದಲ್ಲೇ ಕಳ್ಳತನ ನಡೆದಿದೆ.
ಚಿಕನ್ ಸ್ಟಾಲ್ ನವರು ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ತುಂಡು ಮಾಡಿದ ಬೀಗಗಳು ಎಸೆದ ರೀತಿಯಲ್ಲಿ ಕಾಣ ಸಿಕ್ಕಿದ್ದು ಆ ವೇಳೆ ಕಳ್ಳತನ ನಡೆದ ಬಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ನೀಡದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

























