ಬೆಳಗಾವಿ: ಸೋಲಾರ್ ಕಂಬಕ್ಕೆ ಜಾನುವಾರುಗಳ ತಲೆ ಬುರುಡೆಯನ್ನು ಅಂಟಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಗೋಕಾಕ್ ನಗರದ ಹೊರವಲಯದ ಪಾಲ್ಸ್ ರಸ್ತೆಯಲ್ಲಿ ನಡೆದಿದೆ.
ರಸ್ತೆಗಳ ಬಂದಿಯಲ್ಲಿದ್ದ ಸೋಲಾರ್ ದೀಪಗಳನ್ನು ಕದ್ದು, ಅದಕ್ಕೆ ಜಾನುವಾರುಗಳ ತಲೆ ಬುರುಡೆಯನ್ನು ಅಂಟಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸೋಲಾರ್ ಕಂಬದಲ್ಲಿ ಜಾನುವಾರಿನ ತಲೆ ನೇತಾಡುತ್ತಿರುವುದು ಕಂಡು ಬಂದಿದೆ.

ಯಾರೂ ಇಲ್ಲದ ಸಮಯದಲ್ಲಿ ಸೋಲಾರ್ ಲೈಟ್ ಕದ್ದು ವಿಕೃತಿ ಮೆರೆದಿರುವ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಈ ಕೃತ್ಯವನ್ನು ಯಾರೇ ಮಾಡಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೆತ್ತಿಕೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.


























