ಬೆಳ್ತಂಗಡಿ: ಚಾರ್ಮಾಡಿ ಪಂಡಿಕಟ್ಟೆ ಎಂಬಲ್ಲಿ ಬೈಕ್-ಬೈಕ್ ನಡುವೆ ಪರಸ್ಪರ ಡಿಕ್ಕಿ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಹಿಂಬದಿಯಿಂದ ಬಂದ ಟ್ರಕ್ ಹರಿದು ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಚಾರ್ಮಾಡಿ ಮೇಗಿನಮನೆ ಇಸ್ಮಾಯಿಲ್ ಅವರ ಪುತ್ರ ನಿವಾಸಿ ನಝೀರ್ ಮೇಗಿನಮನೆ (24) ಮೃತಪಟ್ಟ ಯುವಕ.

ಚಾರ್ಮಾಡಿ ಸಮೀಪ ತನ್ನ ಸ್ನೇಹಿತನ ಮನೆಗೆಂದು ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎದುರು ಬದಿಯಿಂದ ಲಾರಿಯನ್ನು ಹಿಂದಿಕ್ಕುವ ಬರದಲ್ಲಿ ಎದುರು ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ನಝೀರ್ ರಸ್ತೆಗೆ ಎಸೆಯಲ್ಪಟ್ಟಿದ್ದ. ಈ ವೇಳೆ ಈತನ ಮೇಲೆ ಟ್ರಕ್ ಹರಿದಿದೆ. ಈ ಕುರಿತು ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಿಬಂದಿಗಳು ಭೇಟಿ ನೀಡಿದ್ದಾರೆ. ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತ ನಝೀರ್ ತಂದೆ, ತಾಯಿ, ಓರ್ವ ಸಹೋದರನನ್ನು ಅಗಲಿದ್ದಾನೆ.
ಜೂ.6- ಜು.9ರವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..


























