ಪುತ್ತೂರು: ಮುಖ್ಯರಸ್ತೆಯ ಅರುಣಾ ಚಿತ್ರ ಮಂದಿರದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ‘ಶಿವ ಆರ್ಕೇಡ್’ ನ ಉದ್ಘಾಟನಾ ಸಮಾರಂಭವು ಜೂ.10 ರಂದು ನಡೆಯಲಿದೆ.
ಮಾಜಿ ಸಚಿವರಾದ ಬಿ. ರಮಾನಾಥ ರೈ ರವರು ಉದ್ಘಾಟನಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ಮಾಜಿ ವಿಪಕ್ಷ ನಾಯಕರಾದ ಎಚ್. ಮಹಮದ್ ಆಲಿ, ನಗರಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ ಹಾಗೂ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ರೋಶನ್ ರೈ ಬನ್ನೂರು ಮತ್ತು ಗಿರಿಧರ್ ಹೆಗ್ಡೆ ಕೊಂಬೆಟ್ಟು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























