ಪುತ್ತೂರು: ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬುಲೆಟ್ನಲ್ಲಿ ಬಂದ ಆರೋಪಿಗಳಿಬ್ಬರು “ಅಕ್ಕ-ಅಕ್ಕಾ” ಎಂದು ಕರೆದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಎಳೆದೊಯ್ದು ಪರಾರಿಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.7 ರಂದು ರತ್ನ ಎಂಬುವವರು ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಂದ ಮನೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ ಕೆಂಪು ಬಣ್ಣದ ಬುಲೆಟ್ ಮುಂದೆ ಹೋಗಿ ಏಕಾಏಕಿ ಟರ್ನ್ ಹೊಡೆದು ಇವರ ಬಳಿ ಬಂದು ನಿಂತು “ಅಕ್ಕ ಅಕ್ಕಾ” ಎಂದು ಕರೆದು ಅದರಲ್ಲಿದ್ದ ಸಹಸವಾರ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರ ಎಳೆದಿದ್ದಾರೆ ಎನ್ನಲಾಗಿದೆ.
ಆಗ ರತ್ನ ಜೋರಾಗಿ ಬೊಬ್ಬೆ ಹಾಕಿ ತನ್ನ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆತ ಬಲವಾಗಿ ಎಳೆದ ಪರಿಣಾಮ ಚಿನ್ನದ ಕರಿಮಣಿ ಸರ ತುಂಡಾಗಿ ಅದರ ಅರ್ಧ ಭಾಗ ರತ್ನ ಬಳಿ ಉಳಿದು ಮತ್ತರ್ಧ ಆತ ಎಳೆದುಕೊಂಡು ಪರಾರಿಯಾಗಿದ್ದಾನೆ.
ಚಿನ್ನದ ಕರಿಮಣಿ ಸರವು ಒಟ್ಟು ಸುಮಾರು 26 ಗ್ರಾಂ ಚಿನ್ನವನ್ನು ಹೊಂದಿದ್ದು, ಆ ಪೈಕಿ ಸುಮಾರು 11 ಗ್ರಾಂ ಚಿನ್ನವನ್ನು ಸದ್ರಿ ವ್ಯಕ್ತಿಯು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆ ಮಾಡಿರುವ ಚಿನ್ನದ ಅಂದಾಜು ಮೌಲ್ಯ ರೂಪಾಯಿ 50 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..

























