ವಿಟ್ಲ: 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರುಮೌಲ್ಯ ಮಾಪನದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲದ ಕುಮಾರಿ ಹರ್ಷ ಎಸ್ ರವರು 2 ಅಂಕದ ಸೇರ್ಪಡೆಯೊಂದಿಗೆ ಒಟ್ಟು 624 ಅಂಕ ಪಡೆದಿದ್ದಾರೆ.

ಪ್ರಸ್ತುತ ಕನ್ನಡ – 124 ಇಂಗ್ಲಿಷ್ -100,ಹಿಂದಿ – 100,ಗಣಿತ – 100 ವಿಜ್ಞಾನ -100 ಸಮಾಜ ಶಾಸ್ತ್ರ- 100 ಹೀಗೆ ಒಟ್ಟು 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಂತಾಗಿದೆ.
ಇವರಿಗೆ ಮೊದಲ ಮೌಲ್ಯಮಾಪನದಲ್ಲಿ ಸಮಾಜವಿಜ್ಞಾನ ದಲ್ಲಿ 98 ಅಂಕ ಬಂದಿದ್ದು, ಮರುಮೌಲ್ಯಮಾಪನದಲ್ಲಿ 2 ಅಂಕ ಸೇರ್ಪಡೆಯಾಗಿ ಒಟ್ಟು 100 ಅಂಕ ಗಳಿಸಿದಂತಾಗಿದೆ .ಇವರು ಈ ಮೂಲಕ ಶಾಲೆಗೆ ಮತ್ತು ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆಯನ್ನು ಪ್ರಶಂಸಿಸಿ ವಿಠ್ಠಲ್ ಜೇಸಿಸ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲೆಯರು ಮತ್ತು ಎಲ್ಲಾ ಶಿಕ್ಷಕ -ಶಿಕ್ಷಕೇತರ ವೃಂದವು ಅಭಿನಂದನೆಯನ್ನು ಸಲ್ಲಿಸಿದೆ.


























