ಪುತ್ತೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ವಿಶೇಷ ಗಣಿತಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ವಾರಾಂತ್ಯದಲ್ಲಿ (ಭಾನುವಾರ) ಪ್ರಾರಂಭಿಸುತ್ತಿದ್ದು, ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಒಂದು ವರ್ಷದ ವಿಶೇಷ ತರಗತಿಗಳು ಆರಂಭವಾಗಲಿದೆ.
ಈ ತರಗತಿಯಲ್ಲಿ ಹಂತ ಹಂತವಾಗಿ ಅಬಾಕಸ್, ವೇದಿಕ್ ಮ್ಯಾಥ್ಸ್, ಸಾಮಾನ್ಯ ಗಣಿತ, ಮಾನಸಿಕ ಸಾಮರ್ಥ್ಯ, ತಾರ್ಕಿಕ ಗಣಿತ(Reasoning)ಮುಂತಾದ ಗಣಿತ ಸಂಬಂಧಿತ ವಿವಿಧ ಮಜಲುಗಳ ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಶೈಕ್ಷಣಿಕವಾಗಿ ಮತ್ತು ಅದರ ಜತೆಗೆ ಸ್ಪರ್ಧಾತ್ಮಕವಾಗಿ ಬೆಳೆಯುವಂತಾಗಲು ಈ ನಮ್ಮ ಯೋಜನೆಯು ಅತ್ಯಂತ ಫಲಪ್ರದವಾಗಲಿದೆ. ಈ ತರಗತಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಮೂಲ ಉದ್ದೇಶವಾಗಿದೆ.
ಭಾನುವಾರದ ದಿನ ನೇರ ತರಗತಿಗಳು ಮತ್ತು ದೂರದ ಊರಿನ ವಿದ್ಯಾರ್ಥಿಗಳಿಗೆ ಆನ್ಲೈನ್ ರೂಪದಲ್ಲಿ ತರಗತಿಗಳು ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ/ತರಬೇತಿ ಕೇಂದ್ರ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಎಂಸಿ ರೋಡ್, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ದ.ಕ 574201.
9620468869 /8590773486
ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..

























