ಪುತ್ತೂರು: ಶ್ರೀ ವಿಷ್ಣು ಯುವಕ ಮಂಡಲ ರಿ. ಉಪ್ಪಳಿಗೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಜೂ.11 ರಂದು ಉಪ್ಪಳಿಗೆ ಶಾಲಾ ವಠಾರದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಸಂಜೀವ ಮಠಂದೂರು ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಯುವಕ ಮಂಡಲ ಅಧ್ಯಕ್ಷರಾದ ಧನಂಜಯ ನಾಯಕ್, ರವರು ವಹಿಸಲಿದ್ದಾರೆ. ಉಪ್ಪಳಿಗೆ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಲೋಕನಾಥ ಆಚಾರ್ಯ ರವರು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ‘ಬ್ರೈಟ್ ವೇ’ ಇಂಡಿಯಾ ಕನ್ಸಲ್ಟೆನ್ಸ್ ನ ಮನಮೋಹನ್ ರೈ ಚೆಲ್ಯಡ್ಕ, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ನೋಟರಿ ವಕೀಲರಾದ ಚಿದಾನಂದ ಬೈಲಾಡಿ, ಉಪ್ಪಳಿಗೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಾಸ್ ಪ್ರಕಾಶ್ ರೈ, ಸಂಪ್ಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಉದಯ ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಕುಕ್ಕುವಳ್ಳಿ, ಯುವ ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಕಮಲ್ ಕನ್ಸ್ಟ್ರಕ್ಷನ್ ನ ಕಮಲ್ ಕುಲಾಲ್ ಸೇರ್ತಾಜೆ, ಶಿವಂ ಕಂಪ್ಯೂಟರ್ ನ ಸುದರ್ಶನ್ ರೈ ನೀರ್ಪಾಡಿ, ನಗರ ಸಭಾ ಸದಸ್ಯರಾದ ಪದ್ಮನಾಭ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯರಾದ ದೇವಪ್ಪ ಯು., ಇರ್ದೆ ಉಪ್ಪಳಿಗೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲಿಂಗಮ್ಮ, ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ನಾರಾಯಣ ಕೆ. ರವರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ, ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರಾದ ಪ್ರವೀಣ್ ರೈ, ವರ್ಗಿಸ್, ಜಗದೀಶ್, ಅದ್ರಾಮ ಹಾಗೂ ಬೆಟ್ಟಂಪ್ಪಾಡಿ ಮೆಸ್ಕಾಂ ಉಪಕೇಂದ್ರದ ಪವರ್ ಮೆನ್ ಗಳಾದ ಮಂಜುನಾಥ್ ಮತ್ತು ಮಿಥುನ್ ರವರು ವಿಶೇಷ ಸನ್ಮಾನವನ್ನು ಸ್ವೀಕರಿಸಲಿದ್ದಾರೆ.
ಛದ್ಮವೇಷ ಸ್ಪರ್ಧಾ ವಿಜೇತರಿಗೆ ಹಾಗೂ ಏಳನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು 10ನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಅಮ್ಮ ಕಲಾವಿದರು ಕುಡ್ಲ ಅಭಿನಯಿಸಿರುವ, ಶಿವಾನಂದ ಶೆಟ್ಟಿ ಮಂಗಲಾಡಿ ಸಾರಥ್ಯದ, ಕುಸಾಲ್ದರಸೆ ಖ್ಯಾತಿಯ ನವೀನ್ ಡಿ. ಪಡೀಲ್ ರವರ ಸಲಹೆ ಸಹಕಾರದೊಂದಿಗೆ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ರಂಗ್ ದ ರಾಜೆ ಖ್ಯಾತಿಯ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿರುವ ‘ಪರಕೆ ಪೂವಕ್ಕೆ’ ತುಳು ಹಾಸ್ಯಮಯ ನಾಟಕ ಮೂಡಿ ಬರಲಿದೆ..


ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..

























