ತನ್ನ ಸಾಮಾಜಿಕ ಸೇವೆ ಮತ್ತು ಬಡವರ ಮೇಲಿನ ಕಳಕಳಿಯ ಮೂಲಕವೇ ಸಮಾಜದಲ್ಲಿ ಪ್ರಖ್ಯಾತಿಗಳಿಸಿರುವ ವ್ಯಕ್ತಿ ಎಂದರೆ ಅದು ‘ಅಶೋಕ್ ಕುಮಾರ್ ರೈ‘ ಕೋಡಿಂಬಾಡಿ. ಹೌದು.. ಸದಾ ಒಂದಲ್ಲಾ ಒಂದು ರೀತಿಯಲ್ಲಿ ಜನಪರ ಸೇವೆಯನ್ನು ಮಾಡುತ್ತಾ, ಬಡ ವರ್ಗದವರ ಪಾಲಿಗೆ ಬೆನ್ನೆಲುಬಾಗಿ ನಿಂತಿರುವ ಉದ್ಯಮಿ ಅಶೋಕ್ ಕುಮಾರ್ ರೈ ಯವರು ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.
ಬಡವರ ಬಂಧು, ಧಾರ್ಮಿಕ ಮುಂದಾಳು, ಸಾಮಾಜಿಕ ಕಳಕಳಿಯ ಸಮಾಜೋದ್ಧಾರಕ ಎಂದೆಲ್ಲಾ ಖ್ಯಾತಿ ಹೊಂದಿರುವ ಅಶೋಕ್ ಕುಮಾರ್ ರೈ ಯವರು ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು..

ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕರಾವಳಿಯ ಕರ್ಣ:
ಹಲವು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.) ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲದೆ ಬಡವರ್ಗದ ಮನೆಯ ಹೆಣ್ಣು ಮಕ್ಕಳ ಮದುವೆ ಸಹಕಾರ, ಬಡವರ್ಗದ ಕುಟುಂಬದಲ್ಲಿ ಯಾರದರೂ ಅನಾರೋಗ್ಯದಿಂದಿದ್ದರೆ ಅವರ ಚಿಕಿತ್ಸೆ ಸಹಾಯ, ಮಳೆಯಿಂದಾಗಿ ಬಡ ವರ್ಗದವರ ಮನೆ ಕುಸಿದು ಬಿದ್ದರೆ ಹೊಸ ಮನೆ ನಿರ್ಮಾಣ ಅಷ್ಟೇ ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಬಡವರ ಜೊತೆ ದೀಪಾವಳಿ ಆಚರಿಸುವ ಮುಖಾಂತರ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮುಖಾಂತರ ಹಲವು ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.

ಅದೇ ರೀತಿ ಕಳೆದ ಕೊರೊನಾ ಸಂದರ್ಭದಲ್ಲಿಯೂ ಬಡ ಜನತೆಗೆ, ಆಟೋ ಚಾಲಕರಿಗೆ ಕಿಟ್ ಗಳನ್ನು ನೀಡುವ ಮೂಲಕ ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಬಸ್ ಪಾಸ್ ವಿತರಣೆ., ಬಡ ವರ್ಗದ ಮಕ್ಕಳಿಗೆ ಶಾಲೆಗೆ ತೆರಳಲು ಬೇಕಾದ ಸಮವಸ್ತ್ರ, ಪುಸ್ತಕಗಳು, ಬ್ಯಾಗ್, ಶಾಲಾ ಶುಲ್ಕ ವಿತರಣೆ., ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ., ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡಿಕೆ ಹೀಗೆ ಹಲವಾರು ವಿಧವಾಗಿ ಸುಮಾರು 7,500 ಕುಟುಂಬಗಳಿಗೂ ಅಧಿಕ ಬಡ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿದ, ಇಂದಿಗೂ ಬಡ ವರ್ಗದ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ‘ಅಶೋಕ್ ಕುಮಾರ್ ರೈ’ ರವರನ್ನು ‘ಕರಾವಳಿಯ ಕರ್ಣ‘ನೆಂದರೆ ತಪ್ಪಾಗಲಾರದು..

ಅಶೋಕ್ ರೈ ಯವರ ದರ್ಬೆಯ ಕಚೇರಿಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ತಮ್ಮ ಸಂಕಷ್ಟಕ್ಕೆ ಸಹಾಯವನ್ನು ನೀಡುವಂತೆ ಬರುತ್ತಿದ್ದು, ಹೇಗೆ ಶಾಸಕರ ಕಚೇರಿಯೆದುರು ಜನ ತಮ್ಮ ಅವಹಾಲುಗಳನ್ನು ಹೇಳಿಕೊಳ್ಳಲು ಬರುತ್ತಾರೋ ಅಂತೆಯೇ ಅಶೋಕ್ ರೈ ರವರ ಕಚೇರಿಯ ಮುಂಭಾಗ ಜನ ತಮ್ಮ ಸಂಕಷ್ಟದ ಸಹಕಾರಕ್ಕಾಗಿ ಸಾಲು ಗಟ್ಟಿ ನಿಂತಿರುತ್ತಾರೆ. ತಮ್ಮ ಬಳಿ ಸಹಾಯಕ್ಕಾಗಿ ಬಂದವರನ್ನ ಖಾಲಿ ಕೈಯಲ್ಲಿ ಕಳುಹಿಸದೆ ಸಹಾಯವನ್ನು ನೀಡಿಯೇ ಅವರನ್ನು ಕಳುಹಿಸುತ್ತಾರೆ. ಈ ಪರೋಪಕಾರ ಗುಣಗಳಿಂದ ಕರಾವಳಿಯ ಮನೆ-ಮನಗಳಲ್ಲಿ ಮನೆಮಾತಗಿರುವ ಅಶೋಕ್ ಕುಮಾರ್ ರೈ ರವರು ಪ್ರತಿ ಕ್ಷಣವೂ ಬಡವರು, ಹಿಂದುಳಿದವರ ಪರ ಮಿಡಿಯುವ ಏಕೈಕ ವ್ಯಕ್ತಿ..

ಮಠಂತಬೆಟ್ಟು ಬ್ರಹ್ಮಕಶೋತ್ಸವದ ಮುಂದಾಳು:
ಇತ್ತೀಚಿಗಷ್ಟೇ ಬಹಳ ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮುಂದಾಳತ್ವವನ್ನು ಅಶೋಕ್ ಕುಮಾರ್ ರೈ ರವರೇ ವಹಿಸಿದ್ದು, ಯಾವುದೇ ಧಾರ್ಮಿಕ ವಿಧಿವಿಧಾನಗಳಿಗೆ ಚ್ಯುತಿ ಬಾರದಂತೆ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ನಡೆಸಿದ್ದರು.

ತನ್ನ ಗ್ರಾಮದಲ್ಲೊಂದು ದೇಗುಲ ನಿರ್ಮಿಸಿ, ಅದರ ಅಭಿವೃದ್ಧಿಗೆ ಶ್ರಮಿಸುವುದೆಂದರೆ ಅದು ಸುಲಭದ ಮಾತಲ್ಲ. ಅದೇ ರೀತಿ ಅಶೋಕ್ ರೈ ರವರ ಹಲವಾರು ವರುಷಗಳ ಪರಿಶ್ರಮದ ಫಲವಾಗಿ ಇಂದು ಮಹಿಷ ಮರ್ದಿನಿ ದೇವಿತಾಣ ಎಲ್ಲರ ಕಣ್ಮನ ಸೆಳೆಯುತ್ತಿದೆ. ಹೌದು.. ಮಹಿಷಮರ್ದಿನೀ ದೇವಸ್ಥಾನ ಇಂದು ಎಲ್ಲರ ಕಣ್ಮನ ಸೆಳೆಯುತ್ತಿದೆ ಎಂದರೆ ಅದರ ಹಿಂದಿರುವ ಕಲಾವಿದ ಅಶೋಕ್ ರೈ.
ಹಲವಾರು ವರ್ಷಗಳ ಕಾಲ ಜೀರ್ಣೋದ್ಧಾರ ಕಾರ್ಯ ನಿಂತು, ಅಶೋಕ್ ಕುಮಾರ್ ರೈ ರವರ ಅಧ್ಯಕ್ಷೀಯ ಅವಧಿ ಬಳಿಕ ಮತ್ತೆ ಹಲವಾರು ಜೀರ್ಣೋದ್ಧಾರ ಕಾರ್ಯಗಳು ನಡೆದು, ಯಾರೂ ಊಹಿಸದ ರೀತಿಯಲ್ಲಿ ದೇಗುಲದ ಕಾರ್ಯಗಳು ನಡೆದು ದೇವಿಯ ಆರಾಧನೆಯ ಮೆರೆಗು ಇಮ್ಮಡಿಯಾಯಿತು. ಅದೇ ರೀತಿ 2021 ರ ಡಿ.21-27 ರವೆರೆಗೆ ಬಹಳ ವಿಜೃಂಭಣೆಯಿಂದ ಯಾವುದೇ ವಿಷಯದಲ್ಲೂ ಕುಂದು ಕೊರತೆಯಾಗದಂತೆ, ಪ್ರತಿದಿನ ಲಕ್ಷಾಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆಗೈಯುವ ಮೂಲಕ ವೈಭವದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಸಿ ವೈಭವಿಕೃತ ಘಳಿಗೆಗೆ ಅಶೋಕ್ ಕುಮಾರ್ ರೈ ರವರು ಕಾರಣಿಕರ್ತರಾಗಿದ್ದಾರೆ..
ವಿಜಯ-ವಿಕ್ರಮ ಜೋಡುಕರೆ ಕಂಬಳದ ಸಂಘಟಕ:
ಕರಾವಳಿಯಲ್ಲಿ ನಡೆಯುವ ಕಂಬಳಗಳಲ್ಲಿ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳವೂ ಪ್ರಸಿದ್ಧಿಯನ್ನು ಪಡೆದಿದೆ. ಉಪ್ಪಿನಂಗಡಿ ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿ ಅಶೋಕ್ ರೈ ಸಾರಥ್ಯದಲ್ಲಿ ಈ ಕಂಬಳವೂ ಬಹಳ ಅದ್ದೂರಿಯಾಗಿ ನಡೆಯುತ್ತಲಿದೆ. ತುಳುನಾಡ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಬೇಕೆಂಬುದು ಅಶೋಕ್ ರೈ ರವರ ಮಹಾದಾಸೆಯಾಗಿದ್ದು, ಈ ಬಗ್ಗೆ 35ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ಮಾತನಾಡಿದ್ದರು.



ಯುವಕರ ಮಾರ್ಗದರ್ಶಕ ಅಶೋಕಣ್ಣ :
ತಮ್ಮ ಸರಳ ಸಜ್ಜನಿಕೆಯ ನಡೆಯ ಮೂಲಕ ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿರುವ ಅಶೋಕ್ ರೈ ರವರು ಯುವಕರ ನೆಚ್ಚಿನ ಅಶೋಕಣ್ಣನಾಗಿ ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದರು ಯಾವುದೇ ಅಹಂ ಸ್ವಭಾವವಿಲ್ಲದೆ ಎಲ್ಲರ ಜೊತೆ ಬೆರೆಯುವ ಗುಣವನ್ನು ಹೊಂದಿದ್ದಾರೆ. ಬಡವರಿಗೆ ಯಾವುದೇ ತೊಂದರೆಯಾದರೂ ಖುದ್ದು ತಾವೇ ಸ್ಥಳಕ್ಕೆ ತೆರಳಿ ಅವರಿಗೆ ಸಹಾಯವನ್ನು ನೀಡುವ ಮೂಲಕ ತಮ್ಮ ಸಜ್ಜನಿಕೆಯ ಔದಾರ್ಯವನ್ನು ಮೆರೆಯುತ್ತಾರೆ. ಅದೇ ರೀತಿ ಹಲವಾರು ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ಮೂಲಕ ಯುವಕರ ಪಾಲಿನ ಮಾರ್ಗದರ್ಶಕರಾಗಿದ್ದಾರೆ.


ಸದಾ ಬಡವರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಶೋಕ್ ಕುಮಾರ್ ರೈ ಅವರಿಂದ ಇನ್ನಷ್ಟು ಸಾಮಾಜಿಕ, ಧಾರ್ಮಿಕ ಕಾರ್ಯಾಗಳಾಗಲಿ, ಕರಾವಳಿ ಅಷ್ಟೇ ಅಲ್ಲದೇ ದೇಶಾದ್ಯಂತ ಮತ್ತಷ್ಟು ಹೆಸರು ಗಳಿಸುವಂತಾಗಲಿ ಎಂಬುದು ನಮ್ಮ ಆಶಯ…
✍️. ವಿಶು.ರೈ



























