ವಿಟ್ಲ: ಲಾರಿಯೊಂದು ಅಗ್ನಿಗಾಹುತಿಯಾದ ಘಟನೆ ಪೆರ್ಲ ಸಮೀಪದ ನಲ್ಕದಲ್ಲಿ ನಡೆದಿದೆ.

ವಿಟ್ಲ ಕಡೆಯಿಂದ ಬದಿಯಡ್ಕ ದತ್ತ ಜಲ್ಲಿ ಹೇರಿಕೊಂಡು ಬರುತ್ತಿದ್ದ ಲಾರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಲಾರಿ ಯನ್ನು ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿ ಕೊಂಡಿದೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಸ್ಥಳಕ್ಕೆ ತಲಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹೆಚ್ಚಿನ ಅನಾಹುತ ತಪ್ಪಿಸಿದರು. ಲಾರಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..


























