ಪುತ್ತೂರು: ಕಾರು, ಎರಡು ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜೂ.9 ರಂದು ಮುಕ್ರಂಪಾಡಿ ಸಮೀಪ ನಡೆದಿದೆ.

ಮುಂಡೂರು ಕಡೆಯಿಂದ ಬರುತ್ತಿದ್ದ ಕಾರು ಮುಕ್ರಂಪಾಡಿ ಮುಖ್ಯರಸ್ತೆಗೆ ಸಂಪರ್ಕ ಹೊಂದುವ ಸಂದರ್ಭ ಪುತ್ತೂರಿನಿಂದ ಸಂಪ್ಯ ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ನಿಂತಾಗ ಹಿಂದಿನಿಂದ ಬರುತ್ತಿದ್ಸ ಮತ್ತೊಂದು ರಿಕ್ಷಾ ಮುಂದಿನ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ರಸ್ತೆಯ ಮಧ್ಯ ಭಾಗಕ್ಕೆ ವಾಲಿದ್ದಲ್ಲದೆ ವಿರುದ್ದ ಧಿಕ್ಕಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.

ಅಪಘಾತದಿಂದಾಗಿ ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

























