ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಅರ್ಚಕರ ಮನೆಗೆ ಬಾಡಿಗೆ ಎಂದು ನಮೂದಿಸಿ ದೇವಳದ ಅಕೌಂಟ್ ನಿಂದ ಹಣ ನಗದೀಕರಿಸಿ ದೇವಸ್ಥಾನಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಭಕ್ತಾಧಿಗಳು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.
ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಇಲಾಖೆಯ ಅನುಮತಿಯಿಲ್ಲದೆ ಅರ್ಚಕರನ್ನು ನೇಮಕ ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ. ಪ್ರಸ್ತುತ ಸಮಿತಿಯ ಸದಸ್ಯರು, ಸ್ವಯಂಘೋಷಿತ ಕಾರ್ಯದರ್ಶಿ ಜನಾರ್ಧನ ಜೋಯಿಸರು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿದ ಅರ್ಚಕರ ನಿವಾಸಕ್ಕೆ ಎಂದು ಪ್ರತಿ ತಿಂಗಳು ರೂ. 3000 ದಂತೆ ಹಣವನ್ನು ದೇವಸ್ಥಾನದ ಅಕೌಂಟಿನಿಂದ ನಗದೀಕರಿಸುತ್ತಿದ್ದು, ಇದು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದುಕೊಂಡು ಈ ರೀತಿ ದೇವಸ್ಥಾನದ ಹಣವನ್ನು ದುರುಪಯೋಗ ಮಾಡಿರುವ ಸದಸ್ಯರಾದ ಜನಾರ್ಧನ ಜೋಯಿಸರನ್ನು ತಕ್ಷಣ ಸಮಿತಿಯಿಂದ ವಜಾಗೊಳಿಸಬೇಕು ಮತ್ತು ಪದೇ ಪದೇ ಕಾನೂನು ಉಲ್ಲಂಘಿಸಿ ಇಲಾಖೆ ಅನುಮತಿ ಇಲ್ಲದೆ ಭಕ್ತರ ಭಾವನೆಗಳಿಗೆ ನೋವನ್ನು ಮಾಡುತ್ತಿರುವ ಈ ಸಮಿತಿಯನ್ನು ವಿಸರ್ಜನೆ ಮಾಡಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.




























