ಪುತ್ತೂರು: ಅಂಗಡಿ ಎದುರು ನಿಲ್ಲಿಸಿ ಅಂಗಡಿಗೆ ಹೋಗಿ ಬರುವ ವೇಳೆ ದ್ವಿಚಕ್ರ ವಾಹನ ಕಳವಾಗಿದೆ ಎಂದು ವ್ಯಕ್ತಿಯೋರ್ವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಮುಂಡೂರು ನಡುಬೈಲು ನಿವಾಸಿ ಜಗದೀಶ್ ಅಮೀನ್ ಎಂಬವರು ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಜೂ.10 ರಂದು ಪುತ್ತೂರಿನ ಕಲ್ಲಾರೆಯ ಡೇನಿಯಲ್ ಫರ್ನಿಚರ್ ಅಂಗಡಿಯ ಮುಂಭಾಗ ಬೈಕ್ ಅನ್ನು ನಿಲ್ಲಿಸಿ ಅಂಗಡಿಗೆ ಹೋಗಿ ಹಿಂತಿರುಗಿ ಬಂದು ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿದ್ದು, ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗದೆ, ಯಾರೋ ಕಳ್ಳರು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 45/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

























