ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಎನ್ ಆರ್ ಎಲ್ ಎಂ ನ ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ಮಹಿಳೆಯರು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಹೊಳೆಯ ಹೂಳೆತ್ತುವ ಕೆಲಸವನ್ನು ಸತತ 10 ದಿನಗಳಿಂದ ನಿರ್ವಹಿಸುತ್ತಿದ್ದು, ಇನ್ನೂ 3,4 ದಿನ ಹೂಳೆತ್ತುವ ಕೆಲಸವನ್ನು ನಿರ್ವಹಿಸಲಿದ್ದಾರೆ.

ಒಟ್ಟು 20 ಸದಸ್ಯರು ಭಾಗವಹಿಸಿದ್ದು, ಹೊಳೆಯಲ್ಲಿ ತುಂಬಿದ ಪ್ಲಾಸ್ಟಿಕ್, ಹಳೆ ಬಟ್ಟೆ, ದಟ್ಟವಾದ ಸಸ್ಯಗಳಿಂದಾಗಿ ನೀರು ಸರಾಗವಾಗಿ ಹರಿಯುದು ಕಷ್ಟಕರ ವಾಗಿತ್ತು. ಮಳೆಗಾಲದಲ್ಲಿ ನೀರು ತೋಟಕ್ಕೆ ನುಗ್ಗಿ ಅಧಿಕ ಪ್ರಮಾಣದ ಬೆಳೆ ನಷ್ಟವಾಗುತಿತ್ತು. ಅಷ್ಟೇ ಅಲ್ಲದೇ ತೋಟಕ್ಕೆ ಹೋಗಲು ಕಷ್ಟ ಕರವಾಗಿತ್ತು.

ಸಂಜೀವಿನಿ ಮಹಿಳೆಯರ ಪರಿಶ್ರಮದಿಂದ ನೀರಿನ ಹರಿವು ಸರಾಗವಾಗಲಿದ್ದು, ತೋಟಗಳಿಗೆ ನೀರು ಹೋಗುವುದನ್ನು ತಪ್ಪಿಸಬಹುದಾಗಿದೆ. ಈ ಕಾರ್ಯದಿಂದಾಗಿ ಸಮೀಪದ ಸಾರ್ವಜನಿಕರಿಗೆ ಸಂತಸವಾಗಿದೆ. ಎಂ ಬಿ ಕೆ ಸವಿತಾ ದಿನೇಶ್ ಆಚಾರ್ಯ ಹಾಗೂ ಎಲ್ ಸಿ ಆರ್ ಪಿ ಜಯಂತಿ ಭಾರತ್ ರವರ ಸಹಕಾರದಲ್ಲಿ ನಡೆದ ಈ ಕೆಲಸಕ್ಕೆ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ ಹಾಗೂ ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ರವರು ಪ್ರೋತ್ಸಾಹ ನೀಡಿದ್ದಾರೆ.





























