ಬೆಳ್ತಂಗಡಿ: ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತವಾಗಿ ಬೆಳ್ತಂಗಡಿ ಮೂಲದ ಯುವಕನೋರ್ವ ಬಹರೈನ್ ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಬ್ರಾಹಿಂ ನಾವೂರು(34) ಮೃತ ಯುವಕ.

ಇಬ್ರಾಹಿಂ ಒಂದೂವರೆ ವರ್ಷದ ಹಿಂದೆ ಸುನ್ನತ್ ಕೆರೆಯ ಯುವತಿಯ ಜೊತೆ ವಿವಾಹವಾಗಿದ್ದರು. ನಿನ್ನೆ ರಾತ್ರಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಇಬ್ರಾಹಿಂಗೆ ಢಿಡೀರ್ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.


























