ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರೌಡಿಶೀಟರ್ ರಾಜ ಯಾನೆ ರಾಘವೇಂದ್ರ ಎಂಬಾತನನ್ನು ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಗಳಿಗೆ ಕೊಲೆ ಕೃತ್ಯಕ್ಕೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿ ಸಹಕರಿಸಿರುವ 9 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆರೋಪಿಗಳಾದ ಸುರತ್ಕಲ್‌ನ ಇಡ್ಯಾದ ಸಂದೀಪ್ ಯಾನೆ ಚೊಟ್ಟೆ ಸಂದೀಪ್ (45), ಕೃಷ್ಣಾಪುರದ ಸಂದೀಪ್ ದೇವಾಡಿಗ ಯಾನೆ ಸ್ಯಾಂಡಿ ( 32),ತಡಂಬೈಲ್‌ನ ಲಿಖೀತ್ ಪ್ರಾಯ(31) , ತೋಟಬೇಂಗ್ರೆಯ ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23), ಮೀನಕಳೀಯಾ ತುಷಾರ್ ಅಮೀನ್ (30), ಪಂಜಿಮೊಗರು, ಕೂಳೂರಿನ ವಿನೋದ್ ಕುಮಾರ್ (32 ), ಬಜ್ಪೆಯ ಲತೇಶ್ ಜೋಗಿ (27), ಬೈಕಂಪಾಡಿ ಸಂದೀಪ್ ಪುತ್ರನ್ (36), ಕಾವೂರು ಮೂಡುಶೆಡ್ಡೆಯ ಅಕ್ಷಿತಾ (28)ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳನ್ನು ಜೂ.12 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಗಳು ರಾಘವೇಂದ್ರ ಹತ್ಯೆಗೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

























