ಮಂಗಳೂರು: ಓವರ್‌ಟೇಕ್ ಮಾಡುವ ವೇಳೆ ಬೈಕ್ ಸ್ಕಿಡ್ ಆಗಿ ಸವಾರ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮೂಡು ಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕೆರೆಕಾಡಿನ ಪ್ರವೀಣ್ (36) ಬೈಕ್ ಅನ್ನು ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಓವರ್‌ಟೇಕ್ ಮಾಡುವ ವೇಳೆ ಬೈಕ್ ಸ್ಕಿಡ್ ಆಗಿದೆ. ಈ ಸಂದರ್ಭ ಕಾರಿನಡಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಪ್ರವೀಣ್ ಅವರು ಕೂಲಿ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಮಂಗಳೂರು, ಮೂಡುಬಿದಿರೆಯ ಹಲವಾರು ಕೀಲು ಕುದುರೆ ತಂಡದಲ್ಲಿ ವೇಷ ಹಾಕುತ್ತಿದ್ದರು. ನವರಾತ್ರಿಯ ಹುಲಿ ವೇಷಧಾರಿಯಾಗಿದ್ದು, ಪುನರೂರು ಮೊಸರು ಕುಡಿಕೆಯ ಸಂದರ್ಭ ಹುಲಿ ವೇಷ ಹಾಕುತ್ತಿದ್ದು, ಉತ್ತಮ ಕ್ರಿಕೆಟ್ ಪಟುವಾಗಿದ್ದರು.
























