ಬಂಟ್ವಾಳ: ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಬಿದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋ ಚಾಲಕರೋರ್ವರು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವ್ಯಾನಿಟಿ ಬ್ಯಾಗ್ ಬಿದ್ದು ಹೋಗಿದ್ದು, ಬ್ಯಾಗ್ ನಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಇದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯರಲ್ಲಿ ಮಾಹಿತಿ ಸಂಗ್ರಹಿಸಿದ್ದು, ಆಟೋ ಚಾಲಕ ಶಂಕರ್ ನಾರಾಯಣ ಶೆಟ್ಟಿ ರವರು ಮಾಣಿಯಿಂದ ಕಲ್ಲಡ್ಕಕ್ಕೆ ತೆರಳುವಾಗ ವ್ಯಾನಿಟಿ ಬ್ಯಾಗ್ ದೊರಕಿದ್ದು, ಅದನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ರುಕ್ಸನಾ ರವರಿಗೆ ಹಿಂದಿರುಗಿಸಿದರು.


























