ಆರ್ಯಾಪು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ, ನಾಯಕರ ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಲು ಯೂತ್ ಕಾಂಗ್ರೆಸ್ ಗೆ ಅವಕಾಶ ಇಲ್ಲ, ಒಂದು ವೇಳೆ ಇಂತಹ ಕಾರ್ಯಕ್ರಮ ನಡೆಸಿದರೆ ಇದು ಪಕ್ಷದ ಚೌಕಟ್ಟಿನಿಂದ ಹೊರಗೆ ಮಾಡಿದಂತಾಗುತ್ತದೆ ಇದಕ್ಕೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷನಾಗಿ ನನ್ನ ಮತ್ತು ಅನೇಕ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಸಮ್ಮತಿ ಇಲ್ಲ ಎಂದು ಯೂತ್ ಕಾಂಗ್ರೆಸ್ ನ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ ತಿಳಿಸಿದ್ದಾರೆ.
ಹಿರಿಯರ ಮತ್ತು ಕಿರಿಯರ ನಡುವಿನ ಕೈ ಗೊಂದಲ ಎಂಬ ಮಾತುಗಳು ಕೇಳಿ ಬಂದಿದೆ ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಪುತ್ತೂರು ಯೂತ್ ಕಾಂಗ್ರೆಸ್ ನ ಪದಾಧಿಕಾರಿಗಳು ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಮತ್ತು ಬ್ಲಾಕ್ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ ರೈ ಯವರ ಜೊತೆ ಸೇರಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ. ಯುವಕರು ಪುತ್ತೂರು ಬ್ಲಾಕ್ ಕಾಂಗ್ರೆಸ್ ನೊಂದಿಗೆ ಇದ್ದಾರೆ, ಹಿರಿಯರ ಮತ್ತು ಕಿರಿಯರ ನಡುವಿನ ಗೊಂದಲ ಎಂಬುದು ಪುತ್ತೂರು ಬ್ಲಾಕ್ ನಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.
ಯೂತ್ ಅಧ್ಯಕ್ಷರು ನಮ್ಮಲ್ಲಿ ಯಾರಲ್ಲಿಯೂ ಈ ಬಗ್ಗೆ ಚರ್ಚಿಸಲಿಲ್ಲ, ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಜನಪ್ರತಿನಿಧಿಗಳ ಸಭೆ ನಡೆಸುವ ಹಕ್ಕು ಬ್ಲಾಕ್ ಅಧ್ಯಕ್ಷರನ್ನು ಹೊರತು ಪಡಿಸಿದರೆ ಯೂತ್ ನವರಿಗೆ ಯಾರಿಗೂ ಇಲ್ಲ., ಯೂತ್ ನವರ ಕಾರ್ಯಕ್ರಮ ನಡೆಸಬಹುದಾಗಿದೆ ಹೊರತು ಜನಪ್ರತಿನಿಧಿಗಳ ಕಾರ್ಯಕ್ರಮ ಮಾಡುವ ಹಕ್ಕು ಪಕ್ಷದಲ್ಲಿ ಇಲ್ಲ.
ಬ್ಲಾಕ್ ವತಿಯಿಂದ ಯೂತ್ ಅಧ್ಯಕ್ಷರಿಗೆ ಹಲವಾರು ಕಾರ್ಯಕ್ರಮ ನಡೆಸುವ ಅವಕಾಶ ನೀಡಿದ್ದು, ಆ ಕಾರ್ಯಕ್ರಮಗಳನ್ನು ನಿರ್ವಹಿಸದೆ ತಮ್ಮಷ್ಟಕ್ಕೆ ತಾವೇ ಸ್ವಪಕ್ಷೀಯ ನಿರ್ಧಾರ ತೆಗೆದುಕೊಂಡು ಪಕ್ಷದ ಯಾವುದೇ ಮುಖ್ಯಸ್ಥರ ಗಮನಕ್ಕೆ ತರದೆ ಅವರಷ್ಟೇ ಕಾರ್ಯಕ್ರಮ ಮಾಡುವ ನಿರ್ಣಯ ತೆಗೆದುಕೊಂಡು ಕೊಂಡಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಯಾವುದೇ ಬೆಂಬಲವಿಲ್ಲ ಯಾಕೆಂದರೆ ನಮಗೆ ಪಕ್ಷದ ನಿರ್ಧಾರವೇ ಅಂತಿಮವಾಗಿದೆ ಎಂದರು.
ಯೂತ್ ಮಟ್ಟದಲ್ಲಿ ಯಾವುದೇ ಕಾರ್ಯಕ್ರಮ ಬೇಕಾದರೂ ಮಾಡಲಿ ಆದರೇ ಜನಪ್ರತಿನಿಧಿಗಳ ಸಭೆ ಕರೆಯಬೇಕಾದರೆ ಪಕ್ಷದ ಅಧ್ಯಕ್ಷರ ಬಳಿ ಸಮಾಲೋಚನೆ ನಡೆಸಿ ನಂತರ ಮುಂದುವರೆಯಬೇಕಾಗಿದೆ. ನಮ್ಮಲ್ಲಿ ಈ ಕಾರ್ಯಕ್ರಮದ ಬಗ್ಗೆ ಯಾವುದೇ ರೀತಿಯ ಚರ್ಚೆಯನ್ನು ಮಾಡಲಿಲ್ಲ, ಅಷ್ಟೇ ಅಲ್ಲದೇ ಫೋನ್ ಮೂಲಕವೂ ಈ ಬಗ್ಗೆ ಯಾವುದೇ ವಿಷಯವನ್ನು ನಮ್ಮಲ್ಲಿ ತಿಳಿಸಲಿಲ್ಲ, ಒಂದು ಸಲವೂ ಸರಿಯಾಗಿ ಯೂತ್ ಸಭೆಯನ್ನು ನಡೆಸಲಿಲ್ಲ,ಬ್ಲಾಕ್ ಅಧ್ಯಕ್ಷರು ಹೇಳಿದ್ದರು ಎಲ್ಲರೂ ಒಟ್ಟಾಗಿ ಪಕ್ಷದ ಸಂಘಟನೆಯ ಬಗ್ಗೆ ಕಾರ್ಯಕ್ರಮ ಮಾಡುವುದರ ಬಗ್ಗೆ ಚರ್ಚೆ ನಡೆಸುವ ಎಂದು ಈ ಬಗ್ಗೆ ಯಾವುದೇ ಸ್ಪಂದನೆ ನೀಡಿದೆ ಅವರಷ್ಟಕ್ಕೆ ಅವರು ಕಾರ್ಯಕ್ರಮ ಮಾಡುವ ಬಗ್ಗೆ ಮುಂದುವರಿಯುತ್ತಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಪಕ್ಷದ ವತಿಯಿಂದ ಯಾವುದೇ ಬೆಂಬಲವಿಲ್ಲ ಎಂದು ಯೂತ್ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಬಾಲಕೃಷ್ಣ ಗೌಡ ಕೆಮ್ಮಾರ ತಿಳಿಸಿದ್ದಾರೆ.

























