ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಜೂ.14 ರಂದು ನೆಹರು ನಗರದಲ್ಲಿ ನಡೆದಿದೆ.

ಪುತ್ತೂರು ಕಲ್ಲಿಮಾರ್ ನಿವಾಸಿ ರವೀಂದ್ರ (60) ಮೃತಪಟ್ಟ ದುರ್ದೈವಿ.
ಪುತ್ತೂರು ನಗರದ ಎಂ.ಟಿ. ರಸ್ತೆಯ ಮಹಮ್ಮಾಯಿ ದೇವಸ್ಥಾನದ ಬಳಿ ಶ್ರೀ ದುರ್ಗಾ ಹೆಸರಿನ ಕೀ ಮತ್ತು ಸ್ಟವ್ ರಿಪೇರಿ ಅಂಗಡಿ ನಡೆಸುತಿದ್ದ ರವೀಂದ್ರ ಅವರು ನೆಹರು ನಗರ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಆಕ್ಟಿವಾ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದರು.
ಆ ಸಂದರ್ಭ ಪುತ್ತೂರು ಪೇಟೆಯಿಂದ ನೆಹರುನಗರ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ನೆಹರುನಗರ ಸಮೀಪದ ಮಾಸ್ಟರ್ ಪ್ಲಾನರಿ ಎದುರು ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ತಲೆಯ ಭಾಗಕ್ಕೆ ಆದ ತೀವ್ರ ಗಾಯದಿಂದಾಗಿ ರವೀಂದ್ರ ಅವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಕೂಡ ಗಾಯಗೊಂದಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರವಿ ರವರು ಪುತ್ತೂರು ಮಹಾಮ್ಮಾಯಿ ದೇವಸ್ಥಾನದ ಬಳಿ ಗ್ಯಾಸ್ ಸ್ಟವ್ ರಿಪೇರಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲರಿಗೂ ರವಿ ಅಣ್ಣನೆಂದೆ ಚಿರಪರಿಚಿತರಾಗಿದ್ದರು.




























