ಮಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆಯ ಹಾಲ್‌ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್‌ಗಳನ್ನು ಸರಿ ಮಾಡುತ್ತಿರುವಾಗ ಬಾಲಕಿಯೋರ್ವಳು ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ.
ಸೆಹರ್ ಇಮ್ತಿಯಾಜ್ (15) ಮೃತಪಟ್ಟ ಬಾಲಕಿ.

ಕಂಕನಾಡಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಅಬ್ದುಲ್ ಖಾದರ್ ಎಂಬುವವರ ಮಗಳು ಸೆಹರ್ ಇಮ್ತಿಯಾಜ್ ಹಾಲ್‌ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್‌ಗಳನ್ನು ಸರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ 5ನೇ ಮಹಡಿಯಿಂದ ಕಟ್ಟಡದ ಕೆಳಗೆ ಬಿದ್ದಿದ್ದಳು.
ಕೂಡಲೇ ಆಕೆಯನ್ನು ಮನೆಯವರು ಮತ್ತು ಅಪಾರ್ಟ್ಮೆಂಟ್ ಜನರು ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.
ಆದರೆ ಆಕೆ ಸುಮಾರು 50ರಿಂದ 60 ಅಡಿ ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಎಡಕಾಲು ಮುರಿತವಾಗಿದ್ದು ತಲೆಗೆ ಮತ್ತು ಮೈಕೈಗೆ ಒಳಪೆಟ್ಟುಗಳಾಗಿತ್ತು. ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಸೆಹರ್ ಇಂತಿಯಾಜ್ ಬಿಜೈ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























