ಪುತ್ತೂರು: ಕೆಲ ದಿನಗಳಿಂದ ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿ ಎದ್ದಿದ್ದ ಗೊಂದಲ ಇದೀಗ ಕ್ಷಮನಗೊಂಡಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ರವರ ಮಧ್ಯ ಪ್ರವೇಶದಿಂದ ಗೊಂದಲಗಳಿಗೆ ತೆರೆ ಬಿದ್ದಿದೆ.
ಯೂತ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಹಸ್ತ ಲಾಘವ’ ಕಾರ್ಯಕ್ರಮವನ್ನು ನಡೆಸದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೋಟಿಸ್ ನೀಡಿದ್ದು, ಈ ಬಗ್ಗೆ ಕೆಲ ದಿನಗಳಿಂದ ಭಾರೀ ಚರ್ಚೆ, ಗೊಂದಲಗಳು ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿತ್ತು.

ಆದರೇ ಇದೀಗ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಹರೀಶ್ ರವರು ಯೂತ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ಮಾತನಾಡಿಸಿದ್ದು, ಇಬ್ಬರ ನಡುವಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಯೂತ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮ ಪಕ್ಷದ ಚೌಕಟ್ಟಿನ ಒಳಗೆ ನಡೆಸಲು ಅವಕಾಶ ಕೊಟ್ಟಿದ್ದು, ‘ಹಸ್ತ ಲಾಘವ’ ಕಾರ್ಯಕ್ರಮವನ್ನು ‘ಯುವ ಹಸ್ತ ಲಾಘವ’ ಕಾರ್ಯಕ್ರಮವನ್ನಾಗಿ ನಡೆಸಲು ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವ ಕಾಂಗ್ರೆಸ್ ನವರು ಯುವ ಕಾರ್ಯಕರ್ತರ ಸಭೆ ನಡೆಸಬೇಕು, ಜನಪ್ರತಿನಿಧಿಗಳ ಹಾಗೂ ಕಾಂಗ್ರೆಸ್ ಮುಖಂಡರ ಸಭೆ ನಡೆಸುವಂತಿಲ್ಲ, ಪಕ್ಷದ ಆಂತರಿಕ ವಿಷಯ ಪತ್ರಿಕೆಗೆ ನೀಡಬಾರದು,ಯುವ ಕಾಂಗ್ರೆಸ್ ಕಾರ್ಯಕ್ರಮ ಹಾಕಿಕೊಳ್ಳು ವಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದು ಕಾರ್ಯಕ್ರಮ ನಡೆಸಬೇಕು,ಕಾಂಗ್ರೆಸ್ ಹಸ್ತಲಾಘವ ಎಂಬುದರ ಬದಲು ಯುವ ಕಾಂಗ್ರೆಸ್ ಹಸ್ತ ಲಾಘವ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಸಬೇಕು, ಪಕ್ಷದ ಪ್ರೊಟೊಕಾಲ್ ಪ್ರಕಾರ ಎಲ್ಲಾ ನಾಯಕರನ್ನು ಕಾರ್ಯಕ್ರಮ ಕರೆಯಬೇಕು, ಪಕ್ಷದಲ್ಲಿ ಯಾವುದೇ ಗೊಂದಲ ಮೂಡಿಸಬಾರದು ಎಂದು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಜಿಲ್ಲಾ ಅಧ್ಯಕ್ಷರು ಕಿವಿ ಮಾತು ಹೇಳಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿನ ಕೆಲ ದಿನಗಳಿಂದ ಸುದ್ದಿಯಾಗುತ್ತಿದ್ದ ಗೊಂದಲ, ಮನಸ್ತಾಪಗಳು ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಸರಿಯಾಗಿದೆ.

























