Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

    ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

    ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

    ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

    ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!

    ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!

    ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!

    ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!

    ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಕೋಡಿಂಬಾಡಿ: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಲು ಆಗ್ರಹ: ಗ್ರಾ.ಪಂ. ಸದಸ್ಯರಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ:; ನೂತನ ಎಂ.ಬಿ.ಕೆ. ಆಯ್ಕೆ ಮಾಡಲು ಇ.ಓ. ಆದೇಶ

June 16, 2022
in ಪುತ್ತೂರು
0
ಕೋಡಿಂಬಾಡಿ: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಲು ಆಗ್ರಹ: ಗ್ರಾ.ಪಂ. ಸದಸ್ಯರಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ:; ನೂತನ ಎಂ.ಬಿ.ಕೆ. ಆಯ್ಕೆ ಮಾಡಲು ಇ.ಓ. ಆದೇಶ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿರುವ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆ ರನ್ನು ಆ ಹುದ್ದೆಯಿಂದ ಬದಲಾವಣೆ ಮಾಡಿ ಒಕ್ಕೂಟದ ಮಾನದಂಡದಂತೆ ನೂತನ ಮುಖ್ಯ ಪುಸ್ತಕ ಬರಹಗಾರರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಮತ್ತು ಜಗನ್ನಾಥ ಶೆಟ್ಟಿ ನಡುಮನೆ ರವರು ಪುತ್ತೂರು ತಾಲೂಕು ಪಂಚಾಯತ್ ಕಛೇರಿ ಎದುರು ಧರಣಿ ಕುಳಿತ ಘಟನೆ ಜೂ.16 ರಂದು ನಡೆದಿದೆ.

Advertisement
Advertisement
Advertisement

ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿರುವ ಸಂಧ್ಯಾ ರಾಮಚಂದ್ರ ಗೌಡ ರವರನ್ನು ಒಕ್ಕೂಟದ ಮಾನದಂಡಗಳನ್ನು ಪಾಲಿಸದೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸಂಬಂಧಿಸಿದವರಿಗೆ ದೂರು ನೀಡಲಾಗಿದೆ.

ಮನವಿಗೆ ಸ್ಪಂದಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಯವರು ಮುಖ್ಯ ಪುಸ್ತಕ ಬರಹಗಾರರನ್ನು ಅಮಾನತುಗೊಳಿಸಿ ಆದೇಶಿಸಿದ್ದರಲ್ಲದೆ ಹೊಸದಾಗಿ ನೇಮಕ ಮಾಡುವಂತೆ ಸೂಚಿಸಿ ಹೊಸ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದರು. ಬಳಿಕ ಇದನ್ನು ಅನುಷ್ಠಾನಕ್ಕೆ ತಾರದೇ ಸಂಧ್ಯಾರವರನ್ನೇ ಮುಖ್ಯ ಪುಸ್ತಕ ಬರಹಗಾರರಾಗಿ ಮುಂದುವರಿಸಲಾಗಿತ್ತು. ಬಳಿಕ ಒಕ್ಕೂಟದ ಯಾವುದೇ ನೀತಿ ನಿಯಮಗಳನ್ನು ಪಾಲಿಸದೆ, ಮಾನದಂಡಗಳನ್ನು ಉಲ್ಲಂಘಿಸಿ ಆಯ್ಕೆಯಾಗಿರುವ ಸಂಧ್ಯಾರವರನ್ನು ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ಹುದ್ದೆಯಿಂದ ಅಮಾನತು ಮಾಡಬೇಕು, ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಸ್ಪಂದಿಸಿದ್ದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ಹೊಸದಾಗಿ ನೇಮಕ ಮಾಡುವಂತೆ ಆದೇಶ ಹೊರಡಿಸಿದ್ದರು. ಆದರೂ ಈ ಆದೇಶವನ್ನು ಇನ್ನೂ ಜಾರಿ ಮಾಡಲಾಗಿಲ್ಲ.

Advertisement
Advertisement

ಭ್ರಷ್ಟಾಚಾರದ ಕೇಸು ಎದುರಿಸುತ್ತಿರುವ ಸಂಧ್ಯಾ ರಾಮಚಂದ್ರ ರವರನ್ನು ಮುಖ್ಯ ಪುಸ್ತಕ ಬರಹಗಾರರ ಹುದ್ದೆಯಿಂದ ಬದಲಾಯಿಸಬೇಕು ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ಎದುರು ನಡೆಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಗಿತ್ತು. ಆಗ ಅಲ್ಲಿಗೆ ಭೇಟಿ ನೀಡಿದ್ದ ಅಧಿಕಾರಿಗಳು ತಮ್ಮ ಬೇಡಿಕೆಗೆ ಸ್ಪಂದಿಸಲಾಗುವುದು ಎಂದು ನಮಗೆ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಆದ್ದರಿಂದ ಒಕ್ಕೂಟದ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ಮಾನದಂಡಕ್ಕೆ ಅನುಸಾರವಾಗಿ ನೂತನ ಮುಖ್ಯ ಪುಸ್ತಕ ಬರಹಗಾರರನ್ನು ಆಯ್ಕೆ ಮಾಡಬೇಕು, ಇಲ್ಲದಿದ್ದಲ್ಲಿ ತಾಲೂಕು ಪಂಚಾಯತ್ ಎದುರು ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಜಯಪ್ರಕಾಶ್ ಬದಿನಾರು ರವರು ಜೂ16 ರಂದು ಬೆಳಿಗ್ಗೆಯೇ ತಾಲೂಕು ಪಂಚಾಯತ್ ಕಛೇರಿ ಎದುರು ಧರಣಿ ಆರಂಭಿಸಿದ್ದರು.

ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ರವರು ಕೂಡಲೇ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಹೇಳಿದರಲ್ಲದೆ ಧರಣಿ ವಾಪಸ್ ಪಡೆಯುವಂತೆ ಹೇಳಿದರು. ತಾ.ಪಂ. ಇ.ಓ.ರವರು ಆದೇಶ ಹೊರಡಿಸಿದ ಬಳಿಕ ಧರಣಿ ವಾಪಸ್ ಪಡೆದುಕೊಳ್ಳಲಾಯಿತು.

ಈ ಹಿಂದೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಹುದ್ದೆಗೆ ಮೂರು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರನ್ನು ಮುಖ್ಯ ಪುಸ್ತಕ ಬರಹಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ನೂತನ ನೇಮಕಾತಿಯನ್ನು ಮಾಡಲು ಆದೇಶಿಸಲಾಗಿದೆ.

ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಎಂ.ಬಿ.ಕೆ. ಹುದ್ದೆಗೆ ಆಯ್ಕೆ ಮಾಡುವ ಅಧಿಕಾರವಿಲ್ಲ. ತಾಲೂಕು ಪಂಚಾಯತ್ ಟಪ್ಪಾಲಿನಲ್ಲಿರುವ ಹೊಸ ಅರ್ಜಿಗಳನ್ನು ಗ್ರಾಮ ಪಂಚಾಯತ್‌ಗೆ ಕಳುಹಿಸಿಕೊಡಲಾಗುವುದು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ(ಎಂ.ಬಿ.ಕೆ) ಆಯ್ಕೆಯಲ್ಲಿ ಗೊಂದಲವಾಗಿ, ಮಾನದಂಡದಲ್ಲಿ ಸೂಚಿಸಲಾಗಿರುವ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರದೇ ಇರುವವರು ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೋಡಿಂಬಾಡಿ ಗ್ರಾಮ ಪಂಚಾಯತ್ ಇವರಿಗೆ ಮಾರ್ಗಸೂಚಿಯನ್ನು ಅನುಸರಿಸಿ ನಿಯಮಾನುಸಾರ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆ ಮಾಡಲು ಆದೇಶಿಸಲಾಗಿತ್ತು. ಆದರೆ, ಈವರೆಗೂ ಮರು ಆಯ್ಕೆ ಮಾಡದೇ ಇರುವುದರ ಬಗ್ಗೆ ಅರ್ಜಿ ಸಲ್ಲಿಕೆಯಾಗಿದೆ. ಇನ್ನೊಂದೆಡೆ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನೇ ಹುದ್ದೆಯಲ್ಲಿ ಮುಂದುವರಿಸಲು ಅರ್ಜಿ ಸಲ್ಲಿಕೆಯಾಗಿದೆ.

ಈ ರೀತಿ ಸದ್ರಿ ಗೊಂದಲದ ಬಗ್ಗೆ ಸೂಕ್ತ ನಿರ್ದೇಶನ ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲಾಗಿದ್ದು ಅದರಂತೆ ಮುಖ್ಯ ಪುಸ್ತಕ ಬರಹಗಾರರ ಆಯ್ಕೆ ಮಾನದಂಡದಂತೆ ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕನಿಷ್ಠ ಪಿಯುಸಿ ಪಾಸಾಗಿರುವ ಸ್ವಸಹಾಯ ಗುಂಪಿನ ಸದಸ್ಯರನ್ನೇ ಆಯ್ಕೆ ಮಾಡಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ. ಆದ್ದರಿಂದ ಈಗಾಗಲೇ ಮಾನದಂಡ ಉಲ್ಲಂಘಿಸಿ ನೇಮಿಸಲಾದ ಮುಖ್ಯ ಪುಸ್ತಕ ಬರಹಗಾರರನ್ನು ಹುದ್ದೆಯಿಂದ ವಜಾಗೊಳಿಸಿ ಅರ್ಹ ಅಭ್ಯರ್ಥಿಯ ಆಯ್ಕೆಗೆ ಕ್ರಮ ಕೈಗೊಳ್ಳಬೇಕಾಗಿಯೂ ಹಾಗೂ ಸಂಬಂಧಿಸಿದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟಕ್ಕೆ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆಗೆ ಕಛೇರಿಯಿಂದ ಆದೇಶ ಮಾಡಲಾಗಿದ್ದರೂ ಈವರೆಗೆ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆ ನಡೆಸದೇ ಇರುವುದರಿಂದ ಮತ್ತು ಈ ಆದೇಶಕ್ಕೂ ಸದ್ರಿ ಒಕ್ಕೂಟ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸದ್ರಿ ಒಕ್ಕೂಟವನ್ನು 15 ದಿವಸದ ಒಳಗಾಗಿ ನಿಷ್ಕ್ರಿಯಗೊಳಿಸಿ, ಒಕ್ಕೂಟದ ಬ್ಯಾಂಕ್ ಖಾತೆಯ ವ್ಯವಹಾರಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸಂಬಂಧಿಸಿದ ಬ್ಯಾಂಕಿಗೆ ಪತ್ರ ವ್ಯವಹಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

Advertisement
Previous Post

ಪುತ್ತೂರು ಬ್ಲಾಕ್ ಕಾಂಗ್ರೆಸ್-ಯೂತ್ ಕಾಂಗ್ರೆಸ್ ಜಟಾಪಟಿ, ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಇತ್ಯರ್ಥ..!!

Next Post

ಪುತ್ತೂರು: ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಕಳೆದ 4 ವರ್ಷಗಳಲ್ಲಿ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 950 ಕೋಟಿ ರೂ. ಅನುದಾನ ಬಂದಿದೆ- ಮಠಂದೂರು

OtherNews

ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!
Featured

ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

March 1, 2026
ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!
Featured

ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮ : ಮಠಂದೂರು ಆರೋಪ…!!!

February 28, 2026
ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!
Featured

ವಿಟ್ಲ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!

February 27, 2026
ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!
Featured

ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ : ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿಪ್ರಶಸ್ತಿ..!!!

February 27, 2026
ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!
Featured

ಉಪ್ಪಿನಂಗಡಿ: ಅಕ್ರಮ ಗೋಹತ್ಯಾ ಪ್ರಕರಣ ದಾಖಲು : ಆರೋಪಿಯ ಮನೆ ಆವರಣ ಜಪ್ತಿ..!!

February 27, 2026
ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!
Featured

ಉಪ್ಪಿನಂಗಡಿ: ಮನೆಯಲ್ಲೇ ಗೋ ಹತ್ಯೆ ನಡೆಸಿ ಮಾಂಸ ಮಾರಾಟ : ಪ್ರಕರಣ ದಾಖಲು..!!

February 27, 2026

Leave a Reply Cancel reply

Your email address will not be published. Required fields are marked *

Recent News

ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

March 1, 2026
ಪ್ರವಾಸದ ವೇಳೆ ನೀರಿನಲ್ಲಿ ಮುಳುಗಿ ಮಹಿಳೆ ಸಾವು..!!

ಪ್ರವಾಸದ ವೇಳೆ ನೀರಿನಲ್ಲಿ ಮುಳುಗಿ ಮಹಿಳೆ ಸಾವು..!!

March 1, 2026
ಉಡುಪಿ: ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದು ಕುಂದಾಪುರ ಗ್ರಾಮಾಂತರ ಎಸ್‌ಐ ನಿಧನ..!!

ಉಡುಪಿ: ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದು ಕುಂದಾಪುರ ಗ್ರಾಮಾಂತರ ಎಸ್‌ಐ ನಿಧನ..!!

March 1, 2026
ವಿಟ್ಲ: ಕಾರು ಮತ್ತು ಆಟೋ ನಡುವೆ ಡಿಕ್ಕಿ..!!!

ವಿಟ್ಲ: ಕಾರು ಮತ್ತು ಆಟೋ ನಡುವೆ ಡಿಕ್ಕಿ..!!!

March 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page