ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಬಗ್ಗೆ ಮಾತನಾಡಿದ ವಿಚಾರದಲ್ಲಿ ವಿಕ್ರಮ ಯೂ ಟೂಬ್ ಚಾನಲ್ ನವರು ಆಡಿಯೋ ಮತ್ತು ವೀಡಿಯೊ ಮಾಡಿ ಫೋನ್ ನಂಬರ್ ಮತ್ತು ಫೋಟೋ ವನ್ನು ಬಳಸಿ ತಪ್ಪು ಸಂದೇಶ ರವಾನೆ ಮಾಡಿದ್ದಾರೆ ಎಂದು ಆರೋಪಿಸಿ ಶೈಲಜಾ ಅಮರನಾಥ್ ರವರು ಠಾಣೆಗೆ ದೂರು ನೀಡಿದ್ದಾರೆ. ಅದೇ ರೀತಿ ಮನೆಯ ಮೇಲೆ ದಾಳಿ ನಡೆಸಿ ಕಚೇರಿಯಲ್ಲಿ ಶ್ರದ್ದಾಂಜಲಿ ಬ್ಯಾನರ್ ಅಳವಡಿಸಿದವರ ವಿರುದ್ಧವೂ ದೂರು ನೀಡಿದ್ದಾರೆ.
ವಿಕ್ರಮ್ ಯೂ ಟೂಬ್ ಚಾನಲ್ ನ ನಿರೂಪಕಿ ಎಂ. ಎಸ್. ಮುಮ್ತಾಜ್ ಹಾಗೂ ಇತರರ ವಿರುದ್ಧ ಮತ್ತು ಮನೆ ಮೇಲೆ ದಾಳಿ ಮಾಡಿದ ಮೂವರು ಅಪರಿಚಿತರ ವಿರುದ್ದ ಠಾಣೆಗೆ ದೂರು ನೀಡಿದ್ದಾರೆ.
ವಿಕ್ರಮ ಯೂ ಟೂಬ್ ಚಾನಲ್ ನವರು ಆಡಿಯೋ ಮತ್ತು ವೀಡಿಯೊ ಮಾಡಿ ಫೋನ್ ನಂಬರ್ ಮತ್ತು ಫೋಟೋ ವನ್ನು ಬಳಸಿ ತಪ್ಪು ಸಂದೇಶ ರವಾನೆ ಮಾಡಿದ್ದಾರೆ ಈ ಹಿನ್ನೆಲೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಅಷ್ಟೇ ಅಲ್ಲದೇ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಹಾನಿಗೊಳಿಸಿದ್ದು, ಕಚೇರಿ ಯಲ್ಲಿ ಶ್ರದ್ದಾಂಜಲಿ ಫೋಟೋವನ್ನು ಹಾಕಿದ್ದು, ಈ ಕೃತ್ಯಕ್ಕೆ ವಿಕ್ರಮ ಯೂ ಟೂಬ್ ಚಾನಲ್ ನಿರೂಪಕಿ ಎಂ. ಎಸ್. ಮುಮ್ತಾಸ್ ಕಾರಣವಾಗಿದ್ದು, ಈ ಹಿನ್ನೆಲೆ ಆಕೆಯ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ : 50/2022 ಕಲಂ 505 ( 2) , 509 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಅದೇ ರೀತಿ ಬೈಕ್ ನಲ್ಲಿ ಬಂದು ಮನೆಯ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಹಾನಿಗೊಳಿಸಿ ಸುಮಾರು 30,000 ರೂ. ಯಷ್ಟು ನಷ್ಟ ಉಂಟು ಮಾಡಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 49/2022 ಕಲಂ: 447,427,34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
























