ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23 ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲ ಹಾಗೂ ಹೊಸದಾಗಿ ದಾಖಲೆ ಹೊಂದಿದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಫ್ರೆಷೆರ್ಸ್ ಡೇ” ವಿನೂತನ ರೀತಿಯಲ್ಲಿ ಆಚರಿಸಲಾಯಿತು.

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೆಜಿ ಯಿಂದ 4ನೇ ತರಗತಿವರೆಗೆ ದಾಖಲಾದ ವಿದ್ಯಾರ್ಥಿಗಳು ಒಟ್ಟು 141 ಹಾಗೂ 5 ರಿಂದ 10 ನೇ ತರಗತಿ ವರೆಗೆ ಒಟ್ಟು 21 ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಏನ್ ಕೂಡೂರು ಹೊಸ ವಿದ್ಯಾರ್ಥಿಗಳು ತಮಗೆ ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರಿಯಾಶೀಲರಾಗಬೇಕು ಎನ್ನುತ್ತಾ ಹೊಸ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

ಈ ಸಂದರ್ಭದಲ್ಲಿ ಈ ವರ್ಷದ ಶಾಲಾ ಮಂತ್ರಿಮಂಡಲದ ಸದಸ್ಯರಿಗೆ ವಿದ್ಯಾರ್ಥಿ ನಾಯಕ ತೇಜಸ್ವಿ ತೆಂಕಬೈಲು ಪ್ರತಿಜ್ಞಾವಿಧಿ ಬೋಧಿಸಿದರು. ಕೆ ಜಿ ಯಿಂದ ಹತ್ತನೇ ತರಗತಿಯ ಹೊಸ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜಯರಾಮ ರೈ ಹಾಗೂ ಉಪ ಪ್ರಾಂಶುಪಾಲರಾದ ಜ್ಯೋತಿ ಶೆಣೈ ಪ್ರಾಸ್ತವಿಕತೆ ಮಾತುಗಳನ್ನಾಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಮೋಹನ ಎ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಸಂತೋಷ್ ಕುಮಾರ್ ಪೆಲತ್ತಡ್ಕ, ಮತೊರ್ವ ಉಪಪ್ರಾಂಶುಪಾಲೆಯಾದ ಹೇಮಲತಾ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ,ಶಾಲಾ ಉಪನಾಯಕ ಕಾಂಚನ್ ಯಶ್ ರಾಜ್ ದೇವದಾಸ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ
ನಿರ್ವಹಣೆಯನ್ನು ವಿದ್ಯಾರ್ಥಿಗಳಾದ ಸಿಂಚನ ಬಿ ಸಿ, ಅಖಿಲೇಶ್, ನಿಹ್ಲಾ ಹೈದರ್, ಆದ್ಯ, ದೃತಿ,ಧಕ್ಷ್,ಗ್ಯಾನದ, ಅಂಜನಾ, ಸಮೃದ್ದಿ, ಧನ್ವಿ, ಸಾನ್ವಿ, ಸಾನ್ವಿ ಡಿ, ಶ್ರೀಮ, ಪಾವನಿ, ಪ್ರಥಮ್ ಪೈ, ಮನೋಜ್ಞ, ನೇಹಾ ನಿರ್ವಹಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಶಿಕ್ಷಕರಾದ ಗುರುವಪ್ಪ ಹಾಗೂ ಗೀತಾ ವಹಿಸಿಕೊಂಡಿದ್ದರು.


























