ಪುತ್ತೂರು: ನವತೇಜ ಮತ್ತು ಜೆಸಿಐ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜೂ. 25 ಮತ್ತು 26 ರಂದು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದ ಬಳಿಯ ಸುಕೃತೀಂದ್ರ ಸಭಾಭವನದಲ್ಲಿ ‘ಹಲಸು ಮೇಳ’ ನಡೆಯಲಿದೆ.

ಮೇಳದಲ್ಲಿ ಹಲಸಿನ ವಿವಿಧ ಖಾದ್ಯಗಳ ಲೈವ್ ಮೇಳದ ಆಕರ್ಷಣೆ. ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳದಲ್ಲಿ ಕಾಣ ಸಿಗಲಿದೆ. ಹಲಸಿನ ತಳಿಗಳ ವೈವಿಧ್ಯಗಳಿವೆ. ಮೌಲ್ಯವರ್ಧನೆ ಮಾಡಿದವರ ಯಶೋಗಾಥೆಗಳಿವೆ.
ಹಲಸಿನ ತೋಟ ಎಬ್ಬಿಸಿದವರ ಕಷ್ಟ-ಸುಖಗಳ ನಿರೂಪಗಳಿವೆ. ಈಗಾಗಲೇ ಈ ಕ್ಷೇತ್ರದಲ್ಲಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದವರ ಮಳಿಗೆಗಳಿವೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್ ಸೇರಿದಂತೆ ಹತ್ತಾರು ಬಗೆಯನ್ನು ಸವಿಯಲು ಅವಕಾಶವಿದೆ ಎಂದು ಜೇಸಿ ಶಶಿರಾಜ್, ಸುಹಾಸ್ ಮರಿಕೆ, ಅನಂತ ಪ್ರಸಾದ್ ನೈತ್ತಡ್ಕ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಳದಲ್ಲಿ ಹಲಸು ಮಾತ್ರವಲ್ಲದೆ ಇತರ ಹಣ್ಣುಗಳ ಪ್ರದರ್ಶನಗಳಿವೆ. ಹಲಸಿನ ಬಳಕೆಯಲ್ಲಿ ವ್ಯಾಪಕವಾಗಿ ಹುರುಪಿನೊಂದಿ ಮೇಳದಲ್ಲಿ ಹಲಸು ಹುರುಪುವಾಗಿ ಮೂಡಿ ಬರಲಿದೆ.
 
	    	



























