ಉಪ್ಪಿನಂಗಡಿ: ಲಕ್ಷೀ ನಗರ ಸಮೀಪದ ಪಾದಚಾರಿಗಳು ಹಾಗೂ ಅಂಗನವಾಡಿ ಮತ್ತು ಖಾಸಗಿ ಶಾಲೆಗೆ ಕಲ್ಪಿಸುವ ಒಳ ರಸ್ತೆಯ ಬದಿಗಳಲ್ಲಿ ಅಪಾಯಕಾರಿಯಾಗಿ ಮರದ ಗೆಲ್ಲುಗಳು ರಸ್ತೆಗೆ ವಾಲಿಕೊಂಡಿದ್ದು, ಇದರಿಂದಾಗಿ ಪಾದಚಾರಿಗಳು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸ್ಥಳಿಯರು ಪುತ್ತೂರು ತಹಶೀಲ್ದಾರ್ ರವರಿಗೆ ದೂರು ನೀಡಿದ್ದರು.

ಈ ಬಗ್ಗೆ ಪುತ್ತೂರು ತಹಶೀಲ್ದಾರ್ ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡಕ್ಕೆ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಇಂದು ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ಅಪಾಯಕಾರಿ ಮರದ ಗೆಲ್ಲುಗಳನ್ನು ಮರಕತ್ತರಿಸುವ ಯಂತ್ರ ಬಳಸಿ ತೆರವುಗೊಳಿಸಿದರು.

ಮರತೆರವು ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್, ಸೇಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಅಣ್ಣು.ಬಿ,ಗೃಹರಕ್ಷಕರಾದ ಸೋಮನಾಥ್, ಸಮದ್, ಪ್ರಶಾಂತ್ ಸಂದರ್ಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಉಷಾಚಂದ್ರ ಮುಳಿಯ, ತಾಲೂಕು ಆಫಿಸ್ ಸಿಬ್ಬಂದಿ ಸುನೀಲ್ ಹಾಗೂ ಸದಸ್ಯ ಸಣ್ಣಣ್ಣ ಸ್ಥಳಿಯ ಶಾಮು ,ಮರಕತ್ತರಿಸುವ ಸಂದರ್ಭದಲ್ಲಿ ಸಹಕರಿಸಿದರು. ಲಕ್ಷೀ ನಗರ ಅಪಾಯಕಾರಿ ಮರದ ಗೆಲ್ಲುಗಳ ತೆರವು ಬಗ್ಗೆ ಮೊನ್ನೆ ಪುತ್ತೂರು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಹ ಮುಂಜಾಗ್ರತಾ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತೆರವುಗೊಳಿಸಲು ಬಗ್ಗೆ ಚರ್ಚೆ ನಡೆಸಿದ್ದರು.


























