ಪುತ್ತೂರು: ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಹಾಗೂ ನ್ಯಾಯವಾದಿಯಾದ ಶೈಲಜಾ ಅಮರನಾಥ್ ರವರು ಹಿಂದೂ ದೇವರಿಗೆ ಅವಮಾನ ಮಾಡಿದ ವಿಚಾರವಾಗಿ ಮಾಜಿ ಶಾಸಕಿ, ಕಾಂಗ್ರೆಸ್ ಮುಖಂಡೆ ಶಕುಂತಲಾ ಶೆಟ್ಟಿ ರವರು ಮಾತನಾಡಿದ್ದು, ಶೈಲಜಾ ಅಮರನಾಥ್ ರವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಅವರು ಪುತ್ತೂರಿನ ಕಾಂಗ್ರೆಸ್ಸಿನ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದದ್ದು, ನಮ್ಮ ಗಮನಕ್ಕೆ ಬಂದಿಲ್ಲ, ಯಾವುದಕ್ಕೂ ಅವರು ಆಗಮಿಸುತ್ತಿಲ್ಲ., ಅಷ್ಟೇ ಅಲ್ಲದೇ ಶೈಲಜಾ ರವರಾಗಲಿ, ಯಾರೇ ಆಗಲಿ ಯಾವುದೇ ಧರ್ಮದ ಬಗ್ಗೆ ಮಾತನಾಡುವುದಕ್ಕೆ, ಅದರ ವಿರೋಧವಾಗಿ ಮಾತನಾಡುವುದಕ್ಕೆ ನಮ್ಮ ಸಮ್ಮತವಿಲ್ಲ., ನಾವು ಯಾವಾಗಲೂ ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ ಎಂದು ಅವರು ಹೇಳಿದರು.
ನಿನ್ನೆ ನೋಡಿದ, ಕೇಳಿದ ಪ್ರಕಾರ ಕ್ಲಬ್ ಹೌಸ್ ನಲ್ಲಿ ಅವರು ಮಾತನಾಡಿದ ವಿಚಾರ ನಿಜವಾದರೆ, ರಾಮನನ್ನು ಅಥವಾ ಆಂಜನೇಯನನ್ನು ಅಷ್ಟೊಂದು ಕೆಲ ಮಟ್ಟದಲ್ಲಿ ಮಾತನಾಡಿದ್ದು, ಸತ್ಯವಾಗಿದ್ದರೆ ಅದನ್ನು ನಾನು ಖಂಡಿತವಾಗಿಯೂ ಖಂಡಿಸುತ್ತೇನೆ ಎಂದರು ಮತ್ತು ಒಂದು ವೇಳೆ ಈ ವಿಡಿಯೋ ಎಡಿಟಿಂಗ್ ಮಾಡಿದ್ದರೆ ಮಾಡಿದವರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಯಾರೇ ಆಗಲಿ ಶ್ರೀರಾಮ, ಆಂಜನೇಯನ ಬಗ್ಗೆಯಾಗಲಿ ಅಥವಾ ಇತರ ಧರ್ಮದ ದೇವರ ಬಗ್ಗೆ ಈ ರೀತಿಯಾಗಿ ಮಾತನಾಡಿದರೆ, ಅವರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದು ಉತ್ತಮ. ರಾಜಕೀಯದಲ್ಲಿ ಏನೇ ಇರಲಿ ಆದರೇ ಯಾವುದೇ ಧರ್ಮದ ದೇವರ ಬಗ್ಗೆ ಮಾತನಾಡುವುದು ದೇವರ ಬಗ್ಗೆ ನಂಬಿಕೆ ಇರಿಸಿಕೊಂಡವರಿಗೆ ನೋವು ಕೊಡುವುದು ತಪ್ಪು, ಅಷ್ಟು ಗೊತ್ತಿಲ್ಲದೆ ಇವರು ಮಾತನಾಡಿದ್ದು, ಖಂಡಿತವಾಗಿಯೂ ತಪ್ಪು, ಅದನ್ನು ನಾನು ಖಂಡಿಸುತ್ತೇನೆ., ಈ ವಿಚಾರದ ಪರವಾಗಿ ನಾವೂ ಯಾರೂ ಇಲ್ಲ., ಅವರು ಏನೇ ಮಾತನಾಡಿದ್ದರು ಅದು ಅವರ ವೈಯಕ್ತಿಕ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.