ಪುತ್ತೂರು: ನವತೇಜ ಪುತ್ತೂರು ಮತ್ತು ಜೆಸಿಐ ಸಂಘಟಿಸಿರುವ “ಹಲಸು ಮೇಳ-ಹಲಸು ಹುರುಪು” ಕಾರ್ಯಕ್ರಮ ಜೂ.25, 26 ರಂದು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ ನಡೆಯಲಿದ್ದು, ಹಲವು ಬಗೆಯ ಹಲಸಿನ ಮಳಿಗೆಗಳಿಗೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮತ್ತು ಕತ್ರಿಬೈಲು ವೆಂಕಟೇಶ್ವರ ಶರ್ಮ ರವರು ಚಾಲನೆಯನ್ನು ನೀಡಿದರು.

ದೀಪ ಬೆಳಗಿಸಿ, ಹಲಸಿನ ಹಣ್ಣನ್ನು ಸವಿಯುವ ಮೂಲಕ ಹಲಸಿನ ವಿವಿಧ ಮಳಿಗೆಗಳಿಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷ ಶಶಿರಾಜ್ ರೈ, ನವತೇಜ ಪ್ರಮುಖರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
