ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವಿವೇಕಾನಂದ ಶಿಶು ಮಂದಿರ ಪುತ್ತೂರು ಇದರ 24ನೇ ವರ್ಷದ ಕೃಷ್ಣಲೋಕ ಕಾರ್ಯಕ್ರಮದ ಸಮಿತಿ ರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ರಾಜಿ ಬಲರಾಮ್, ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ, ಪ್ರಧಾನ ಕಾರ್ಯದರ್ಶಿಯಾಗಿ, ದಾಮೋದರ ಪಾಟಾಳಿ, ಕೋಶಾಧಿಕಾರಿಯಾಗಿ ಗಿರೀಶ್ ಎಂ, ಉಪಾಧ್ಯಕ್ಷರಾಗಿ ವಸಂತ ಜಾಲಾಡಿ, ವಿದ್ಯಾ ಗೌರಿ, ಗೌರಿ ಬನ್ನೂರು ಜೊತೆ ಕಾರ್ಯದರ್ಶಿಯಾಗಿ ಪ್ರಭಾ ಬೊಳ್ವಾರ್ ಮತ್ತು ಮಂಜುಳ ಗಣೇಶ್, ಸದಸ್ಯರಾಗಿ ಸಂತೋಷ್ , ಗೋಪಾಲಕೃಷ್ಣ, ಈಶ, ಸುರೇಶ್, ದೀಕ್ಷಾ, ನಿತಿನ್ ಶೆಣೈ, ಪುಷ್ಪರಾಜ್, ವೀಣಾ ಸರಸ್ವತಿ ಹಾಗೂ ಎಲ್ಲಾ ಪೂರ್ವಾಧ್ಯಕ್ಷರುಗಳನ್ನು ಗೌರವ ಸಲಹೆಗಾರರಾಗಿ ನೇಮಿಸಲಾಯಿತು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾದ ಶಿವಪ್ರಸಾದ್, ಶಿಶುಮಂದಿರದ ಅಧ್ಯಕ್ಷರಾದ ರಾಜ್ ಗೋಪಾಲ ಭಟ್, ಸಂಚಾಲಕರಾದ ಅಕ್ಷಯ್ ಕುಮಾರ್, ಪೂರ್ವ ಅಧ್ಯಕ್ಷ ಅಶೋಕ್ ಕುಂಬ್ಳೆ , ಶಂಕರ ಭಟ್ , ಮಮತಾ, ಅಶೊಕ್ ಬಲ್ನಾಡ್ , ಮಲ್ಲೆಶ್ , ಸತೀಶ್ ವಾಗ್ಲೆ, ಶಿಶು ಮಂದಿರದ ಮಾತಾಜಿಗಳು, ಪಾಲಕರು ಮತ್ತಿತರು ಉಪಸ್ಥಿತರಿದ್ದರು.