ಪುತ್ತೂರು: ಪ್ರಸಿದ್ಧ ವೈದ್ಯರಾದ ಡಾ. ಪ್ರಸಾದ್ ಎಮ್ ಕೆ ಭಂಡಾರಿಯವರಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(IMA) ವತಿಯಿಂದ ವೈದ್ಯರ ದಿನದ ಪ್ರಶಸ್ತಿ ಒಲಿದು ಬಂದಿದೆ.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಸ್ಟೇಟ್ ಬೋರ್ಡ್ ನಿಂದ ಪ್ರತಿ ವರ್ಷ ಕೆಲವೇ ಕೆಲವು ವೈದ್ಯರಿಗೆ ಕೊಡುವ ಪ್ರತಿಷ್ಠಿತ ‘ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ ಅವಾರ್ಡ್’ ಈ ಬಾರಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಪ್ರಸಾದ್ ಭಂಡಾರಿ ರವರಿಗೆ ಒಲಿದಿದೆ.

ಅವಾರ್ಡ್ ಸಬ್ ಕಮಿಟಿ ಆಫ್ ಐಎಮ್ ಎ ಕರ್ನಾಟಕ ಸ್ಟೇಟ್ ಬ್ರಾಂಚ್ ರವರು ಡಾ. ಪ್ರಸಾದ್ ಭಂಡಾರಿಯವರ ಐಎಮ್ ಎ ಯ ಕಾರ್ಯಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡಿರುವ ಬಗ್ಗೆ, ಉತ್ತಮ ವೈದ್ಯಕೀಯ ಸೇವೆಗಳಿಗಾಗಿ ಅದೇ ರೀತಿ ಅವರ ಸಮಾಜಮುಖೀ ಕೆಲಸಗಳಿಗಾಗಿ ಈ ಪ್ರಶಸ್ತಿಗೆ ಆಯ್ದುಕೊಂಡಿದ್ದಾರೆ.
ಡಾ. ಪ್ರಸಾದ್ ಭಂಡಾರಿಯವರು ಈ ಪ್ರಶಸ್ತಿಯನ್ನು ವೈದ್ಯರ ದಿನವಾದ ಜು.1 ರಂದು ಡಾ. ಬಸವ ರಾಜೇಂದ್ರ ಆಡಿಟೋರಿಯಂ (ಬಿಎಂಸಿ ಅಲುಮ್ನಿಂ ಅಸೋಸಿಯೇಷನ್ ಕಟ್ಟಡ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕ್ಯಾಂಪಸ್, ಕೆ.ಆರ್. ರಸ್ತೆ,) ಬೆಂಗಳೂರಿನಲ್ಲಿ ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಾಧೀಶ ಎನ್ ಸಂತೋಷ್ ಹೆಗ್ಡೆಯವರಿಂದ ಪಡೆಯಲಿದ್ದಾರೆ.
ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ (IMA) ವತಿಯಿಂದ ಪ್ರತಿಷ್ಠಿತ ‘ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ’ ಪ್ರಶಸ್ತಿಯನ್ನು ಪ್ರತಿವರ್ಷ ಆಯ್ದ ಕೆಲ ವೈದ್ಯರಿಗೆ ನೀಡುತ್ತಿದ್ದು, ಅದೇ ರೀತಿ ಈ ಬಾರಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಪ್ರಸಾದ್ ಭಂಡಾರಿ ರವರಿಗೆ ದೊರಕಿದೆ.
ಪುತ್ತೂರು IMA ಬ್ರಾಂಚ್ ಇತಿಹಾಸದಲ್ಲಿ ಮೊದಲ ಬಾರಿ:
ಪುತ್ತೂರು ವೈದ್ಯಕೀಯ ಸಂಘದ ಇತಿಹಾಸದಲ್ಲಿ ಪ್ರತಿಷ್ಠಿತ ‘ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ’ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದ ವೈದ್ಯರೆಂದರೆ ಅದು ಡಾ. ಪ್ರಸಾದ್ ಭಂಡಾರಿ ಯವರಾಗಿದ್ದು, ಪುತ್ತೂರಿನ ಹೆಮ್ಮೆಯ ವೈದ್ಯರಾಗಿರುವ ಡಾ. ಪ್ರಸಾದ್ ಭಂಡಾರಿಯವರಿಗೆ IMA-KSB Doctors Day Award ನ ಈ ಪ್ರಶಸ್ತಿ ಒಲಿದಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, Puttur IMA ವತಿಯಿಂದ ಡಾ. ಪ್ರಸಾದ್ ಭಂಡಾರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
























