ಮಂಗಳೂರು: ಕರಾವಳಿಯಲ್ಲಿ ರವಿವಾರ ಮಳೆ ಮತ್ತೆ ಸ್ವಲ್ಪ ಬಿಡುವು ನೀಡಿತ್ತು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಉಡುಪಿ, ಕುಂದಾಪುರ, ಬ್ರಹ್ಮಾವರ, ಪಡುಬಿದ್ರಿ, ಕಾಪು, ಕುಂದಾಪುರ, ಕಾರ್ಕಳ, ಹೆಬ್ರಿ, ಅಜೆಕಾರು ಭಾಗದಲ್ಲಿ ಹಲವೆಡೆ ಬಿಸಿಲಿನ ನಡುವೆ ಸಾಧಾರಣ ಮಳೆಯಾಗಿದೆ. ಸಂಜೆ ಬಳಿಕ ಕೆಲವೆಡೆ ಮಳೆ ಸುರಿದಿದೆ.
ಮುಂಗಾರು ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಜೂ. 27ರಿಂದ 30ರವರೆಗೆ ಎಲ್ಲೋ ಅಲರ್ಟ್ ಘೊಷಿಸಲಾಗಿದೆ.
ಈ ವೇಳೆ ಉತ್ತಮ ಮಳೆ, ಗುಡುಗು ಸಹಿತ ಗಾಳಿ ಕೂಡ ಇರಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

























