ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ಸಾಗಾಟ ಲಾರಿ ಮಗುಚಿ ಬಿದ್ದ ಘಟನೆ ವಿಟ್ಲ- ಕಾಸರಗೋಡು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಕಲ್ಲು ತುಂಬಿದ್ದ ಲಾರಿಯನ್ನು ರಸ್ತೆಯ ಬದಿ ನಿಲ್ಲಿಸಿ ಚಾಲಕ ಚಹಾ ಕುಡಿಯಲು ತೆರಳಿದ ವೇಳೆ ಈ ಘಟನೆ ನಡೆದಿದೆ.

ಅಪಘಾತದಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ, ಮಳೆಗಾಲವಾದ ಕಾರಣ ಮಣ್ಣು ಸಡಿಲಗೊಂಡಿದ್ದು, ಈ ಹಿನ್ನೆಲೆ ಕಲ್ಲು ತುಂಬಿದ ಲಾರಿ ನಿಂತ ವೇಳೆ ಮಣ್ಣು ಕುಸಿದಿದ್ದು, ಲಾರಿ ಮಗುಚಿ ಬಿದ್ದಿದೆ ಎಂದು ವರದಿಯಾಗಿದೆ..


























