ಬೆಂಗಳೂರು: ಜುಲೈ 1 ರಿಂದ ರಾಜ್ಯದ ಜನತೆಗೆ ಸರಕಾರ ಕರೆಂಟ್ ಶಾಕ್ ನೀಡಲು ಸಿದ್ಧತೆ ನಡೆಸಿಕೊಂಡಿದೆ. ಜುಲೈ 1ರಿಂದಲೇ ಈ ಹೊಸ ದರ ನಿಗದಿಯಾಗಿದೆ.
ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ) ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕಾಂ)ನಿಂದ ಪ್ರಸ್ತಾವ ಸಲ್ಲಿಸಲು ಅನುಮೋದಿಸಲಾಗಿತ್ತು.
ಇದರ ಅನ್ವಯ ಇದೀಗ ದರ ಹೆಚ್ಚು ಮಾಡಲಾಗಿದೆ. ವಿದ್ಯುತ್ ದರ 100 ಯೂನಿಟ್‌ಗೆ 19 ರೂಪಾಯಿಯಿಂದ 31 ರೂಪಾಯಿವರೆಗೆ ಹೆಚ್ಚಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಯಿಂದ 31 ರೂಪಾಯಿ ಪಾವತಿಸಬೇಕಾಗಿದೆ.
ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ, ಕಲ್ಲಿದ್ದಲು ಅಭಾವ, ದರ ಹೆಚ್ಚಳ ಹಾಗೂ ಎಸ್ಕಾಂಗಳು ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣ, ದರ ಹೆಚ್ಚಳ ಅನಿವಾರ್ಯವಾಗಿದೆ ಎಂಬ ಕಾರಣ ನೀಡಲಾಗಿದೆ.


























