ಪುತ್ತೂರು: ನಿಡ್ಪಳ್ಳಿ ಬರೆಂಬೊಟ್ಟು ನಿವಾಸಿ ದಿ.ನಾರಾಯಣ ಗೌಡರ ಪುತ್ರ ಶಿವಕುಮಾರ್ (32) ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೂ.28 ರಂದು ನಿಧನರಾದರು.

ಶಿವಕುಮಾರ್ ರವರು ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆ ವಿಶ್ರಾಂತಿಗಾಗಿ ಮನೆಗೆ ಬಂದಿದ್ದರು. ಜ್ವರ ಕಡಿಮೆಯಾದರೂ ಮತ್ತೆ ವಿಪರೀತ ಅನಾರೋಗ್ಯಕ್ಕೀಡಾದ ಕಾರಣ ಅವರನ್ನು ಮೊದಲಿಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ತಾಯಿ ವಿಶಾಲಾಕ್ಷಿ, ಸಹೋದರ ಸುಧೀರ್ ಕುಮಾರ್ ಹಾಗೂ ಸಹೋದರಿ ಭವ್ಯ ರನ್ನು ಅಗಲಿದ್ದಾರೆ.


























