ಪುತ್ತೂರು: ವಾಸವಾಗಿರುವ ಜಾಗದ ಹಕ್ಕು ಪತ್ರವನ್ನು ದೊರಕಿಸಿಕೊಡುವಂತೆ ಬೆಳ್ಳಿಪ್ಪಾಡಿ ಗ್ರಾಮದ ಪಾದೆಕಲ್ಲು ಮತ್ತು ಜರಿ ಪರಿಶಿಷ್ಟ ಕಾಲೋನಿ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ಳಿಪ್ಪಾಡಿ ಗ್ರಾಮದ ಪಾದೆಕಲ್ಲು ಮತ್ತು ಜರಿ ಪರಿಶಿಷ್ಟ ಕಾಲೋನಿ ನಿವಾಸಿಗಳು ಸುಮಾರು ನೂರು ವರ್ಷಗಳಿಂದ 13 ಕುಟುಂಬಗಳು ಕೃಷಿ ಮತ್ತು ಕೂಲಿ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಾ ಇದ್ದು, ಸರಕಾರದ ಭೂಮಿಯ ಒತ್ತುವರಿ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಇದುವರೆಗೆ ನಮಗೆ ಹಕ್ಕು ಪತ್ರವನ್ನು ಕೊಟ್ಟರುವುದಿಲ್ಲ ಆದುದರಿಂದ ನಾವು ಸರಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯಲು ಅನರ್ಹರಾಗಿದ್ದು, ಬಡವರಾದ ನಮಗೆ ಜೀವನ ನಡೆಸಲು ಬಹಳ ಸಂಕಷ್ಟವಾಗುತ್ತಿದೆ.
ಈ ಬಗ್ಗೆ ನಾವು ಅನೇಕ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನ ಸಿಗದ ಕಾರಣ ಮನವಿಯನ್ನು ಪರಿಶೀಲಿಸಿ, ಪರಿಷ್ಕರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಯಪ್ರಕಾಶ್ ಬದಿನಾರು, ನವೀನ್, ಮಾಧವ್, ನೋಣಯ್ಯ, ನಾಗೇಶ್ ಉಪಸ್ಥಿತರಿದ್ದರು.




























