ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಎಂಬ ಹಿಂದೂ ಯುವಕನನ್ನು ಹತ್ಯೆ ಮಾಡಿದ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ ಕೃತ್ಯವನ್ನು ವೈಭವೀಕರಿಸಿ ದೇಶದ ಪ್ರಧಾನ ಮಂತ್ರಿಯವರಿಗೂ ಬೆದರಿಕೆಯೊಡ್ಡಿರುವುದನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಘಟನೆಯ ಹಿಂದೆ ದೇಶದ್ರೋಹಿ ಸಂಘಟನೆಗಳಾದ ಐ ಎಸ್ ಐ ಎಸ್ ಮತ್ತು ಪಿಎಫ್ ಐ ಭಾಗಿಯಾಗಿರುವುದನ್ನು ಎನ್ ಐ ಎ ಸಹ ಧೃಡಪಡಿಸಿದೆ. ಈ ಎಸ್ ಡಿ ಪಿಐ ಮತ್ತು ಪಿಎಫ್ಐ ಸಂಘಟನೆಗಳು ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ದೇಶದ್ರೋಹಿ ಕೃತ್ಯಗಳನ್ನು ಅವ್ಯಾಹತವಾಗಿ ಹಲವಾರು ವರ್ಷಗಳಿಂದಲೂ ನಡೆಸುತ್ತಲೇ ಬಂದಿರುತ್ತವೆ. ಕರ್ನಾಟಕದಲ್ಲೂ ಈ ಎರಡು ಸಂಘಟನೆಗಳು ಇದೇ ರೀತಿಯ ಕೊಲೆ,ದೊಂಬಿ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಮೂಲಕ ಆರಾಜಕಥೆಯನ್ನು ಸೃಷ್ಟಿಸುವ ಮೂಲಕ ಭಯೋತ್ಪಾದನೆಯನ್ನು ಸಮಾಜದಲ್ಲಿ ಉಂಟು ಮಾಡುತ್ತಲೇ ಬಂದಿವೆ.
ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೃತ್ಯದ ಹಿಂದಿರುವ ಎಲ್ಲಾ ಮತಾಂಧ ಸಂಘಟನೆಗಳು, ಆ ಸಂಘಟನೆಗಳನ್ನು ಪೋಷಿಸುತ್ತಿರುವ ಕಾಣದ ಕೈಗಳ ಮೇಲೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕು ಮತ್ತು ಎಸ್ ಡಿ ಪಿಐ, ಪಿಎಫ್ಐ ಸಂಘಟನೆಗಳನ್ನು ಈ ಕೂಡಲೇ ನಿಷೇಧಿಸಬೇಕೆಂದು ಆಗ್ರಹಿಸಿದೆ.




























